Tuesday, April 30, 2024
Homeತಾಜಾ ಸುದ್ದಿಹಾಲಿನ ಡೈರಿಯೊಳಗೆ ಸ್ನಾನ ಮಾಡಿದ ಭೂಪ: ಮಿಲ್ಕ್ ಬಾತ್ ಮಾಡಿದಾತ ಈಗ ಪೊಲೀಸರ ಅತಿಥಿ

ಹಾಲಿನ ಡೈರಿಯೊಳಗೆ ಸ್ನಾನ ಮಾಡಿದ ಭೂಪ: ಮಿಲ್ಕ್ ಬಾತ್ ಮಾಡಿದಾತ ಈಗ ಪೊಲೀಸರ ಅತಿಥಿ

spot_img
- Advertisement -
- Advertisement -

ಟರ್ಕಿ: ಟರ್ಕಿಯಲ್ಲಿ ವ್ಯಕ್ತಿಯೊಬ್ಬ ಹಾಲಿನ ಡೈರಿಯೊಳಗೆ ಸ್ನಾನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಡೈರಿಯಲ್ಲಿ ಕೆಲಸ ಮಾಡ್ತಿದ್ದ ನೌಕರ ದೊಡ್ಡ ಹಾಲಿನ ಕಂಟೇನರ್​​​ನಲ್ಲಿ ಕುಳಿತು, ಜಗ್​ನಿಂದ ಹಾಲನ್ನ ತಲೆ ಮೇಲೆ ಸುರಿದುಕೊಂಡು ಆಹಾ.. ಎಂಥಾ ಸ್ನಾನ ಅಂತ ಆನಂದಿಸುತ್ತಿದ್ದ. ಇದನ್ನ ಆತನ ಸಹೋದ್ಯೋಗಿಯೊಬ್ಬ ವಿಡಿಯೋ ಮಾಡಿ, ಆನ್​ಲೈನ್​ನಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆಗ್ತಿದ್ದಂತೆ ಸ್ನಾನ ಮಾಡಿದ ವ್ಯಕ್ತಿ ಹಾಗೂ ವಿಡಿಯೋ ಮಾಡಿದವನನ್ನ ಪೊಲೀಸರು ಬಂಧಿಸಿದ್ದಾರೆ.

ಟರ್ಕಿಯ ಕೋನ್ಯಾದ ಸೆಂಟ್ರಲ್ ಆಂಟೋಲಿಯನ್ ಪ್ರಾಂತ್ಯದಲ್ಲಿರೋ ಡೈರಿಯಲ್ಲಿ, ನೌಕರ ಎಮ್ರಿ ಸಾಯರ್ ಎಂಬಾತ ಸ್ನಾನ ಮಾಡಿದ್ದಾನೆ. ಆತನೊಂದಿಗಿದ್ದ ಉಗುರ್​ ಟರ್ಗುಟ್​ ಇದನ್ನ ಚಿತ್ರೀಕರಿಸಿ ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದ. ಬಳಿಕ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಹರಿದಾಡಿದ್ದು, ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಡೈರಿಯನ್ನ ಬಂದ್​ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

- Advertisement -
spot_img

Latest News

error: Content is protected !!