ಮೈಸೂರು: ಇಲ್ಲಿನ ಟಿ.ಕೆ.ಬಡಾವಣೆಯಲ್ಲಿ ಸೆಲ್ಫಿ, ವಿಡಿಯೋ ಮಾಡಿ ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರೇ ಕಾರಣ ಎಂದು ಹೇಳಿ ಸ್ನೇಹಿತರಿಗೆ ಕಳುಹಿಸಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ.ಆತ್ಮಹತ್ಯೆ ಮಾಡಿಕೊಂಡಾತನನ್ನು ಟಿ.ಕೆ.ಬಡಾವಣೆಯ ನಿವಾಸಿ ನಾಗರಾಜ್ (42) ಎಂದು ಗುರುತಿಸಲಾಗಿದೆ.
ಈತನುಎಂಟು ವರ್ಷದ ಹಿಂದೆ ಪ್ರೇಮಿಸಿ ನಂಜನಗೂಡಿನ ಮಂಜುಳಾ ಎಂಬುವರನ್ನು ವಿವಾಹವಾಗಿದ್ದ.ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯು ತಾಯಿ ನಾಗಮ್ಮ, ಸಹೋದರರಾದ ಮಣಿಕಂಠ, ಸುಂದರ, ಸ್ನೇಹಿತೆ ನಾಗಮಣಿ ಅವರೊಂದಿಗೆ ಸೇರಿ ಊರಿನಲ್ಲಿರುವ ಆಸ್ತಿಯಲ್ಲಿ ಪಾಲು ಕೊಡಿಸಬೇಕು ಎಂದು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ನಾಗರಾಜ್ ಆರೋಪಿಸಿದ್ದಾರೆ.
ನಾಗರಾಜು ತಾಯಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ವಿಡಿಯೋವನ್ನು ಆಧರಿಸಿ ಹೆಂಡತಿ ಮಂಜುಳಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.