Wednesday, June 3, 2026
Homeಕರಾವಳಿಉಜಿರೆ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯೊಪಾಧ್ಯಯ ಪ್ರಸನ್ನ ಕುಮಾರ್ ಜೈನ್ ಶವವಾಗಿ ಪತ್ತೆ!

ಉಜಿರೆ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯೊಪಾಧ್ಯಯ ಪ್ರಸನ್ನ ಕುಮಾರ್ ಜೈನ್ ಶವವಾಗಿ ಪತ್ತೆ!

- Advertisement -
- Advertisement -

ಬೆಳ್ತಂಗಡಿ: ಕೆಲ ದಿನಗಳಿಂದ ಉಜಿರೆಯಿಂದ ನಾಪತ್ತೆಯಾಗಿದ್ದ ಶಾಲಾ ನಿವೃತ್ತ ಮುಖ್ಯೋಪಾಧ್ಯಯ ಪ್ರಸನ್ನ ಕುಮಾರ್ ಜೈನ್ ಅವರು ಸುಬ್ರಹ್ಮಣ್ಯ ಸಮೀಪದ ಬಿಸಲೆ ಘಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇಂದು ಮದ್ಯಾಹ್ನ ಮೂರು ಗಂಟೆ ಸುಮಾರಿಗೆ ಒಂದು ಮೃತದೇಹ ಸಿಕ್ಕಿದೆ ಹಾಗೂ ಘಾಟ್ ನ ಮಾರ್ಗದ ಬದಿ ಪ್ರಸನ್ನ ಅವರ ಬೈಕ್ ಕೂಡಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಆಕ್ಟೋಬರ್ 22 ರ ಬೆಳಿಗ್ಗೆ ಹಾಲು ತರುವುದಕ್ಕಾಗಿ ಉಜಿರೆ ಡೈರಿಗೆ ಹೋದವರು ನಂತರ ಬೈಕ್ ಸಮೇತ ನಾಪತ್ತೆಯಾಗಿದ್ದರು. ಈ ಕುರಿತು ಪೋಲಿಸ್ ಪ್ರಕರಣ ದಾಖಲಾಗಿತ್ತು.

ನಂತರ ಅವರ ಮೊಬೈಲ್ ನ ಕೊನೆಯ ಲೊಕೆಶನ್ ಟ್ರೆಸ್ ಮಾಡಿದಾಗ ಕೊಕ್ಕಡ ಸಮೀಪದ ಪಾರ್ಪಿಕಲ್ಲಿನ ಸಮೀಪ ಪತ್ತೆಯಾಗಿತ್ತು.

ಪೋಲೀಸ್ ತನಿಖೆಯಿಂದಷ್ಟೇ ಮೃತ ದೇಹದ ಖಚಿತತೆ ಹಾಗೂ ನಿಜ ವಿಷಯ ತಿಳಿದು ಬರಬೇಕಾಗಿದೆ.

- Advertisement -

Latest News

error: Content is protected !!