Wednesday, June 24, 2026
Homeತಾಜಾ ಸುದ್ದಿನಾಯಿಯನ್ನು ರೇಪ್ ಮಾಡಿ, ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು

ನಾಯಿಯನ್ನು ರೇಪ್ ಮಾಡಿ, ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು

- Advertisement -
- Advertisement -

ಮುಂಬೈ: ನಾಯಿಯ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯ ಎಸಗಿರೋದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. 8 ವರ್ಷದ ನೂರಿ ಎಂಬ ಹೆಣ್ಣು ಶ್ವಾನದ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮುಂಬೈನ ಪೊವಾಯ್ ಶಾಪಿಂಗ್ ಕಾಂಪ್ಲೆಕ್ಸ್ ಒಳಗಡೆ ಈ ಅಮಾನವೀಯ ಘಟನೆ ನಡೆದಿದೆ.

ಮಹಿಳೆಯೊಬ್ಬರು ಪ್ರಾಣಿಗಳಿಗೆ ಪ್ರತಿದಿನ ಆಹಾರ ಮತ್ತು ಔಷಧಿ ನೀಡುತ್ತಾರೆ. ಹೀಗೆ ಅವರು ಗುರುವಾರ ಆಹಾರ ನೀಡೋದಕ್ಕೆ ಬಂದಾಗ ನಾಯಿಯ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸ್ಥಳೀಯ ಪಶು ವೈದ್ಯರ ಬಳಿ ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ.

ಪರೀಕ್ಷೆ ನಡೆಸಿದ ವೈದ್ಯರು ಯಾವುದೋ ಒಂದು ಬಲವಾದ ವಸ್ತು ಶ್ವಾನದ ದೇಹದೊಳಗೆ ಹೊಕ್ಕಿದೆ. ಪರಿಣಾಮ ಈ ರೀತಿ ರಕ್ತಸ್ರಾವವಾಗುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಅಲ್ಲದೆ ಕಿಡಿಗೇಡಿಗಳು ಶ್ವಾನದ ಖಾಸಗಿ ಅಂಗದ ಮೂಲಕ 11 ಇಂಚಿನ ಕೋಲು ತುರುಕಿರುವುದು ಬೆಳಕಿಗೆ ಬಂದಿದ್ದು, ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ಸದ್ಯ ನೂರಿಯ ಖಾಸಗಿ ಅಂಗದಿಂದ ಕೋಲನ್ನು ಹೊರತೆಗೆದಿದ್ದು, ಅದರ ಸ್ಥಿತಿ ಚಿಂತಾಜನಕವಾಗಿದೆ. ನಾಯಿಯ ಕರುಳಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ದೇಹದ ಇತರ ಅಂಗಗಳು ಕೂಡ ಹಾನಿಗೊಳಗಾಗಿವೆ. ಹೀಗಾಗಿ ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.

- Advertisement -

Latest News

error: Content is protected !!