Thursday, June 4, 2026
Homeಕರಾವಳಿಚೆನ್ನೆ ಫಾರೂಕ್ ಕೊಲೆ ಆರೋಪಿಗಳ ಮೇಲೆ ಫೈರಿಂಗ್ ಪ್ರಕರಣ: ತಪ್ಪಿಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳ ಬಂಧನ

ಚೆನ್ನೆ ಫಾರೂಕ್ ಕೊಲೆ ಆರೋಪಿಗಳ ಮೇಲೆ ಫೈರಿಂಗ್ ಪ್ರಕರಣ: ತಪ್ಪಿಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು:  ನಿನ್ನೆ ಬಂಟ್ವಾಳದಲ್ಲಿ ನಡೆದ ರೌಡಿಶೀಟರ್ ಚೆನ್ನೆ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ರೌಡಿಶೀಟರ್ ಇಬ್ರಾಹಿಂ ಖಲೀಲ್ ಮೇಲೆ ಫೈರಿಂಗ್ ನಡೆಸುವ ವೇಳೆ ಪರಾರಿಯಾಗಿದ್ದ ಉಳಿದ ಇಬ್ಬರೂ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಈರಯ್ಯ ನೇತೃತ್ವದ ತಂಡ ಬಂಧಿಸಿದೆ.

ಪರಾರಿಯಾಗಿದ್ದ ಆರೋಪಿ ಹಫೀಜ್ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿ ರಹಸ್ಯ ತಾಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಗುಂಡು ಹಾರಿಸಿ ಆರೋಪಿ ಇಬ್ರಾಹಿಂ ಖಲೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮೆಲ್ಕಾರ್ ಬಳಿ ವೈಯಕ್ತಿಕ ದ್ವೇಷದಿಂದ ರೌಡಿ ಶೀಟರ್‌ ಫಾರೂಕ್ ಕೊಲೆ ನಡೆದಿತ್ತು.

- Advertisement -

Latest News

error: Content is protected !!