Sunday, June 7, 2026
Homeತಾಜಾ ಸುದ್ದಿಚೆನ್ನೈ ನೋಡಬೇಕೆಂದು ತ್ರಿಪುರಾದಿಂದ ವಿಮಾನದಲ್ಲಿ ಬಂದು ಸಿಕ್ಕಿ ಬಿದ್ದ ಬಾಲಕ- ಬಾಲಕಿ

ಚೆನ್ನೈ ನೋಡಬೇಕೆಂದು ತ್ರಿಪುರಾದಿಂದ ವಿಮಾನದಲ್ಲಿ ಬಂದು ಸಿಕ್ಕಿ ಬಿದ್ದ ಬಾಲಕ- ಬಾಲಕಿ

- Advertisement -
- Advertisement -

ಚೆನ್ನೈ: ಚೆನ್ನೈ ನೋಡಬೇಕೆಂದು ಮನೆಯಲ್ಲಿ ಹೇಳದೇ ವಿಮಾನದಲ್ಲಿ ಬಂದ 17 ವರ್ಷದ ಬಾಲಕ ಹಾಗೂ 14 ವರ್ಷದ ಬಾಲಕಿ ಚೆನ್ನೈನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಚೆನ್ನೈ ನೋಡ್ಬೋಕು ಅಂತಾ ತ್ರಿಪುರಾದಿಂದ ವಿಮಾನದ ಮೂಲಕ ಆಗಮಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಇವರಿಬ್ಬರೂ ಚೆನ್ನೈಗೆ ಬಂದಿಳಿದಿದ್ದಾರೆ. ಸ್ನೇಹಿತನೊಬ್ಬ ಇವರನ್ನು ಕರೆದೊಯ್ಯಬೇಕಿತ್ತು. ಆದರೆ ಆತ ಬಂದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇವರು ಅಲೆದಾಡುವುದನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಬಳಿಕ ಮೊಬೈಲ್ ಫೋನ್‍ಗಳಿಂದ ಮಕ್ಕಳ ಪೋಷಕರ ಆಧಾರ್ ಕಾರ್ಡ್ ವಿವರ ಪಡೆದು, ನಂತರ ಅವರ ಪೋಷಕರನ್ನು ಸಂಪರ್ಕಿಸಿ. ಬಳಿಕ ತ್ರಿಪುರಾಗೆ ಕಳುಹಿಸಿಕೊಡಲಾಗಿದೆ. ಇನ್ನು ಪೋಷಕರು ಕೂಡ ಈ ಇಬ್ಬರು ಮನೆಯಿಂದ ಕಾಣೆಯಾಗಿರುವುದನ್ನು ಖಚಿತಪಡಿಸಿದ್ದರು.

- Advertisement -

Latest News

error: Content is protected !!