Sunday, June 7, 2026
Homeಕರಾವಳಿಕೊಕ್ಕಡ ಶಾಲೆಯಿಂದ ಕಂಪ್ಯೂಟರ್ ಮತ್ತು ಸಿಲಿಂಡರ್ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಕೊಕ್ಕಡ ಶಾಲೆಯಿಂದ ಕಂಪ್ಯೂಟರ್ ಮತ್ತು ಸಿಲಿಂಡರ್ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸ.ಹಿ.ಪ್ರಾ ಶಾಲೆಯಿಂದ ಕಳೆದ ಬುಧವಾರದಂದು (ಅ-20) ಕಂಪ್ಯೂಟರ್‌ ಕೋಣೆ, ಬಿಸಿಊಟದ ಕೊಠಡಿ ಹಾಗೂ ತರಗತಿಗಳ ಕೊಠಡಿಯ ಬೀಗವನ್ನು ಮುರಿದು ಒಳಪ್ರವೇಶಿಸಿದ್ದ ಕಳ್ಳರು ಕಂಪ್ಯೂಟರ್‌ ಕೊಠಡಿಯಲ್ಲಿದ್ದ 2 ಕಂಪ್ಯೂಟರ್‌ ಹಾಗೂ ಬಿಸಿಊಟದ ಕೊಠಡಿಯಲ್ಲಿ ಇಂಡೇನ್‌ ಗ್ಯಾಸ್‌ ಸಿಲಿಂಡರ್‌ ವೊಂದನ್ನು ಕಳವು ಮಾಡಿದ್ದ ಘಟನೆ ನಡೆದಿತ್ತು.

ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ನಾಯ್ಕ್ ಮತ್ತು ಅವರ ಸಿಬ್ಬಂದಿಗಳ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಕ್ಕಡ ನಿವಾಸಿ ಕೃಷ್ಟಾನಂದ ,ಸಿದ್ಧಿಕ್ ಹಾಗೂ ಇಚಲಂಪಾಡಿಯ ವಿನೋದ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು

ಬಂಧಿತರಿಂದ ಕಳವು ಆಗಿದ್ದ ‌ ಅಂದಾಜು ಮೌಲ್ಯ 27,000/- ರೂ.ವಿನ ಕಂಪ್ಯೂಟರ್ ಹಾಗೂ ರೂ 3000 ಮೌಲ್ಯದ ಇಂಡೇನ್‌ ಗ್ಯಾಸ್‌ ಸಿಲಿಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ‌.

- Advertisement -

Latest News

error: Content is protected !!