Friday, June 5, 2026
Homeಕರಾವಳಿವಿಟ್ಲ: ಅಗ್ನಿಅವಘಡದಲ್ಲಿ ಸುಟ್ಟು ಕರಕಲಾದ ಎರಡು ಅಂಗಡಿಗಳು

ವಿಟ್ಲ: ಅಗ್ನಿಅವಘಡದಲ್ಲಿ ಸುಟ್ಟು ಕರಕಲಾದ ಎರಡು ಅಂಗಡಿಗಳು

- Advertisement -
- Advertisement -

ವಿಟ್ಲ: ಬೆಳ್ಳಂಬೆಳಗ್ಗೆಯೇ ಸಂಭವಿಸಿದ ಅಗ್ನಿಅವಘಡದಲ್ಲಿ ಎರಡು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆ.ಜೆ.ಟವರ್ಸ್ ನಲ್ಲಿರುವ ಎಂ.ಪಿ. ಹಾರ್ಡ್ ವೇರ್ ಮತ್ತು ಪೈಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಆರಂಭದಲ್ಲಿ ಪೈಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಪಕ್ಕದಲ್ಲಿದ್ದ ಬೇಕರಿಗೂ ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಎರಡೂ ಅಂಗಡಿಗಳು ಸುಟ್ಟು ಹೋಗಿದೆ.

- Advertisement -

Latest News

error: Content is protected !!