Monday, June 8, 2026
Homeತಾಜಾ ಸುದ್ದಿನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ - ಹೈಕೋರ್ಟ್‌ನಿಂದ ಸಿಸಿಬಿಗೆ ನೋಟಿಸ್‌!.. ಹೊರಬರ್ತಾರ ರಾಗಿಣಿ?..

ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ – ಹೈಕೋರ್ಟ್‌ನಿಂದ ಸಿಸಿಬಿಗೆ ನೋಟಿಸ್‌!.. ಹೊರಬರ್ತಾರ ರಾಗಿಣಿ?..

- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ಎ ಪಾಟೀಲ ಅವರಿದ್ದ ನ್ಯಾಯಪೀಠ ‌ ಸಿಸಿಬಿಗೆ ನೋಟಿಸ್‌ ಜಾರಿಗೊಳಿಸಿದೆ.ಪ್ರಕರಣ ಸಂಬಂಧ ಎನ್‌ಡಿಪಿಎಸ್‌ ವಿಶೇಷ ಕೋರ್ಟ್‌ ಸೆ.28ರಂದು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಗಿಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯನ್ನು ಅ.23ಕ್ಕೆ ಮುಂದೂಡಿದ್ದು,ರಾಗಿಣಿ ಪರ ವಕೀಲ ಎ. ಮೊಹಮ್ಮದ್‌ ತಾಹಿರ್‌ ವಾದ ಮಂಡಿಸಿ, ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೂ ರಾಗಿಣಿಗೂ ಯಾವುದೇ ಸಂಬಂಧವಿಲ್ಲ. ಅವರು ಡ್ರಗ್ಸ್‌ ಸೇವಿಸಿಲ್ಲ. ಪೂರೈಕೆ ಅಥವಾ ಮಾರಾಟವೂ ಮಾಡಿಲ್ಲ. ಪೊಲೀಸರು ಮಾಡಿರುವ ಆರೋಪಗಳಿಗೆ ಸಾಕ್ಷ್ಯಾಧಾರ ಹಾಗೂದಾಖಲೆ ಇಲ್ಲ. ರವಿಶಂಕರ್‌ ಹೇಳಿಕೆ ಆಧರಿಸಿ ಹಾಗೂ ಕಾನೂನು ದುರ್ಬಳಕೆ ಮಾಡಿ ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದಾರೆ.ಎಂದು ವಾದಿಸಿದ್ದಾರೆ.

- Advertisement -

Latest News

error: Content is protected !!