Saturday, June 6, 2026
HomeUncategorizedಮಹಿಳೆಯರಿಗೆ ಬ್ಯಾಡ್ ನ್ಯೂಸ್!.. ಚಿನ್ನದ ದರ ಏರಿಕೆ;

ಮಹಿಳೆಯರಿಗೆ ಬ್ಯಾಡ್ ನ್ಯೂಸ್!.. ಚಿನ್ನದ ದರ ಏರಿಕೆ;

- Advertisement -
- Advertisement -

ಬೆಂಗಳೂರು: ಗರಿಷ್ಟ ಮಟ್ಟದಲ್ಲಿ ಇಳಿಕೆ ಕಂಡಿದ್ದ ಚಿನ್ನದ ದರ ಏರಿಕೆ ಕಂಡಿದೆ.ಕೊರೋನಾ ವಾತಾವರಣದಲ್ಲಿ ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಚಿನ್ನದ ಮೇಲೆ ಹೂಡಿಕೆ ಜಾಸ್ತಿಯಾಗಿತ್ತು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.

ಹೀಗಾಗಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ ವಾರ ಒಟ್ಟು 370 ರೂಪಾಯಿ ಏರಿಕೆ ಕಂಡಂತಾಗಿದೆ.
ವಾರದ ಕೊನೆಯಲ್ಲಿ ಚಿನ್ನದ ದರ ಏರಿಕೆ ಕಾಣಲು ಆರಂಭಿಸಿದೆ. ಆಭರಣ ಚಿನ್ನ 10 ಗ್ರಾಂಗೆ 70 ರೂಪಾಯಿ ಏರಿಕೆ ಕಾಣುವ ಮೂಲಕ 47,650 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 70 ರೂಪಾಯಿ ಏರಿಕೆ ಕಾಣುವ ಮೂಲಕ 51,980 ರೂಪಾಯಿ ಆಗಿದೆ.

- Advertisement -

Latest News

error: Content is protected !!