Friday, June 5, 2026
Homeಕರಾವಳಿಬೊಳುವಾರಿನ ಮಳಿಗೆಯಲ್ಲಿ ಅಗ್ನಿಅನಾಹುತ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ!

ಬೊಳುವಾರಿನ ಮಳಿಗೆಯಲ್ಲಿ ಅಗ್ನಿಅನಾಹುತ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ!

- Advertisement -
- Advertisement -

ಪುತ್ತೂರು : ಇಲ್ಲಿನ ಬೊಳುವಾರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅಂಗಡಿ ಮಳಿಗೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ನಡೆದಿದೆ. ಹೆದ್ದಾರಿ ಪೆಟ್ರೋಲ್ ಪೊಲೀಸರ ಸಕಾಲಿಕ ಮಾಹಿತಿಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದ್ದು ಜನ ಪೋಲೀಸರ ಕಾರ್ಯಕ್ಷಮತೆಯನ್ನು ಹೊಗಳಿದ್ದಾರೆ.

ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಗಸ್ತು ನಿರತ ಸಿಬ್ಬಂದಿಗಳ ಸಕಾಲಿಕ ಮಾಹಿತಿಯ ಮೂಲಕ ಭಾರೀ ಅನಾಹುತ ತಪ್ಪಿದೆ. ಅಗ್ನಿಶಾಮಕದಳ ಆಗಮಿಸಿಸಿದ್ದು ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿರುವ ಉಸ್ಮಾನ್ ಮಾಲೀಕತ್ವದ ಹ್ಯಾರಿಂಗ್ ಸ್ಟುಡಿಯೋದಲ್ಲಿ ಬೆಂಕಿ ಜ್ವಾಲೆ ಹತ್ತಿಕೊಂಡಿತ್ತು.

ಪಕ್ಕದಲ್ಲಿರುವ ನಿಶಾದ್ ಎಂಬವರ ಡಿ.ಕೆ.ಮೊಬೈಲ್ಸ್ ಅಂಗಡಿಗೂ ಬೆಂಕಿ ಹರಡಿತ್ತು. .ಮೂರುವರೆ ಗಂಟೆಯ ಸತತ ಕಾರ್ಯಾಚರಣೆ ಮತ್ತು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!