Sunday, June 14, 2026
Homeತಾಜಾ ಸುದ್ದಿಆನೆ ಮೇಲೆ ಯೋಗಸಾನ ಮಾಡಲು ಹೋಗಿ ಕೆಳಗೆ ಬಿದ್ದ ಬಾಬಾ ರಾಮದೇವ್, ವೈರಲ್ ಆಯ್ತು...

ಆನೆ ಮೇಲೆ ಯೋಗಸಾನ ಮಾಡಲು ಹೋಗಿ ಕೆಳಗೆ ಬಿದ್ದ ಬಾಬಾ ರಾಮದೇವ್, ವೈರಲ್ ಆಯ್ತು ವಿಡಿಯೋ

- Advertisement -
- Advertisement -

ಮಥುರಾ: ಮಥುರಾದ ರಾಮನಾರತಿಯಲ್ಲಿನ ಮಹಾವನದಲ್ಲಿ ಇರುವ ಗುರು ಶರಣನ್ ಆಶ್ರಮದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಆನೆಯ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದು ನಗೆಪಾಟಲಿಗೀಡಾಗಿದ್ದಾರೆ. ರಾಮ್‌ದೇವ್ ಅವರ ‘ಗಜ ಯೋಗಾಸನ’ದ ವಿಡಿಯೋ ಇದೀಗ ವೈರಲ್ ಆಗಿದೆ.

ಗುರು ಶರಣನ್ ಆಶ್ರಮದಲ್ಲಿ  ಸನ್ಯಾಸಿಗಳಿಗೆ ಯೋಗಾಭ್ಯಾಸ ಹೇಳಿ ಕೊಡುತ್ತಿದ್ದ ವೇಳೆ ರಾಮ್‌ದೇವ್ ಆನೆಯ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ 22 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿದೆ.

ಆನೆಯ ಮೇಲೆ ಕುಳಿತ ಬಾಬಾ ರಾಮ್‌ದೇವ್ ಯೋಗಾಸನ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ಯೋಗಾಸನ ಮಾಡುವ ಸಂದರ್ಭದಲ್ಲಿ ಆನೆ ಕೊಂಚ ಅಲುಗಾಡಿದೆ. ಆಗ ಸಮತೋಲನ ತಪ್ಪಿದ ರಾಮ್‌ದೇವ್ ಕೆಳಗೆ ಬಿದ್ದಿದ್ದಾರೆ.

ಆನೆಯ ಬೆನ್ನಿನ ಮೇಲಿಂದ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್ ಬಾಬಾ ರಾಮ್‌ದೇವ್ ಅವರಿಗೆ ಗಾಯಗಳಾಗಿಲ್ಲ. ಸಾವರಿಸಿಕೊಂಡು ನೆಲದಿಂದ ಎದ್ದ ಕೂಡಲೇ ರಾಮ್‌ದೇವ್ ಜೋರಾಗಿ ನಗುತ್ತಾ, ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದರು.

- Advertisement -

Latest News

error: Content is protected !!