Thursday, June 4, 2026
Homeಕರಾವಳಿಉಡುಪಿಮೂಲ್ಕಿ ಮಾರಿಯಮ್ಮ ದೇವಳದಲ್ಲಿ ಕಳವು- ಗರ್ಭಗುಡಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!..

ಮೂಲ್ಕಿ ಮಾರಿಯಮ್ಮ ದೇವಳದಲ್ಲಿ ಕಳವು- ಗರ್ಭಗುಡಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!..

- Advertisement -
- Advertisement -

ಮೂಲ್ಕಿ :ಇಲ್ಲಿನ ಬಪ್ಪಬ್ಯಾರಿ ರಸ್ತೆಯ ಅಕ್ಕಸಾಲಿಗರ ಕೇರಿ ಬಳಿಯ ಪುರಾತನ ಮಾರಿಯಮ್ಮ ದೇವಸ್ಥಾನ, ಸಹಿತ ಸಮೀಪದ ಮೂಕಾಂಬಿಕಾ ಮಂದಿರದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳ ಸರಣಿ ಕಳ್ಳತನ ನಡೆದ ಬಗ್ಗೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮಾರಿಗುಡಿ ದೇವಸ್ಥಾನಕ್ಕೆ ತಡರಾತ್ರಿ ನುಗ್ಗಿರುವ ಕಳ್ಳರು ಬೀಗ ಮುರಿದು ಕಬ್ಬಿಣದ ಸರಪಳಿ ತುಂಡರಿಸಿ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಕಳ್ಳರು ಮಾರಿಗುಡಿ ಹಿಂಭಾಗದಿಂದ ಬಂದಿರುವ ಸಾಧ್ಯತೆ ಇದ್ದು ಈ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಕಳ್ಳರು ಸಮೀಪದಲ್ಲಿರುವ ಕೆಳಗಿನಮನೆ ರಘುವೀರ ಕೋಟ್ಯಾನ್ ಎಂಬವರ ಮೂಕಾಂಬಿಕಾ ಮಂದಿರ ದಲ್ಲಿಯೂ ಕಳ್ಳತನ ನಡೆಸಿದ್ದಾರೆ.ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಳ್ಳತನವಾದ ಚಿನ್ನಾಭರಣಗಳ ಹಾಗೂ ಘಟನೆಯ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Latest News

error: Content is protected !!