Sunday, June 7, 2026
Homeಕರಾವಳಿಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ದಲಿತ ಯುವತಿಗೆ ಲೈಂಗಿಕ ವಂಚನೆ ಆರೋಪ, ಆಂಧ್ರ ಪೊಲೀಸರಿಂದ ರಾಜಕೀಯ ನಾಯಕರೊಬ್ಬರ...

ಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ದಲಿತ ಯುವತಿಗೆ ಲೈಂಗಿಕ ವಂಚನೆ ಆರೋಪ, ಆಂಧ್ರ ಪೊಲೀಸರಿಂದ ರಾಜಕೀಯ ನಾಯಕರೊಬ್ಬರ ಮಗನ ಬಂಧನ

- Advertisement -
- Advertisement -

ಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ದಲಿತ ಯುವತಿಗೆ ಮದುವೆಯಾಗುವುದಾಗಿ ವಂಚಿಸಿ, ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ ಆಕೆಯ ಭಾವಚಿತ್ರಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊಲೀಸರು ಪುತ್ತೂರಿನ ರಾಜಕೀಯ ಪಕ್ಷದ ಮುಖಂಡರೊಬ್ಬರ ಪುತ್ರನನ್ನು ನಿನ್ನೆ ವಶಕ್ಕೆ ಪಡೆದು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ನಿವಾಸಿ ಅಬ್ದುಲ್ ಹಮೀದ್ ಸಾಲ್ಮರ ಎಂಬವರ ಪುತ್ರ ಮೊಹಮ್ಮದ್ ಪೈಝಲ್(24ವ) ಎಂಬವರು ಬಂಧಿತ ಆರೋಪಿ.

ಅ.4ರಂದು ಸಂಜೆ ಆರೋಪಿಯ ಹುಡುಕಾಟದಲ್ಲಿ ಪುತ್ತೂರಿಗೆ ಬಂದಿದ್ದ ಆಂಧ್ರಪ್ರದೇಶದ ಪೊಲೀಸರು, ರಾತ್ರಿ ವೇಳೆ ಆರೋಪಿ ಮೊಹಮ್ಮದ್ ಫೈಝಲ್ ಅವರನ್ನು ಮನೆಯಿಂದ ಬಂಧಿಸಿ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!