Friday, June 5, 2026
Homeತಾಜಾ ಸುದ್ದಿ'ರಾಗಿಣಿ, ಸಂಜನಾ ಕೂದಲು ಸ್ಯಾಂಪಲ್'-ಯಡವಟ್ಟು ಮಾಡಿತೇ ತನಿಖಾ ತಂಡ?.. ವಿಧಿವಿಜ್ಞಾನ ಪ್ರಯೋಗಾಲಯ ಕೂದಲು ತಿರಸ್ಕರಿಸಿದ್ಯಾಕೆ?

‘ರಾಗಿಣಿ, ಸಂಜನಾ ಕೂದಲು ಸ್ಯಾಂಪಲ್’-ಯಡವಟ್ಟು ಮಾಡಿತೇ ತನಿಖಾ ತಂಡ?.. ವಿಧಿವಿಜ್ಞಾನ ಪ್ರಯೋಗಾಲಯ ಕೂದಲು ತಿರಸ್ಕರಿಸಿದ್ಯಾಕೆ?

- Advertisement -
- Advertisement -

ಬೆಂಗಳೂರು: ನಟಿ ರಾಗಿಣಿ, ಸಂಜನಾ ಡ್ರಗ್ಸ್ ವ್ಯಸನಿಗಳೇ ಎಂಬ ಅನುಮಾನದ ಹಿನ್ನಲೆಯಲ್ಲಿ ಅವಶ್ಯಕವಾಗಿರುವ ಪೂರಕ ಸಾಕ್ಷಿಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಇಬ್ಬರ ಕೂದಲು ಸ್ಯಾಂಪಲ್ ಅನ್ನು ಹೈದರಾಬಾದ್‌ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತನಿಖಾ ತಂಡದ ಪೊಲೀಸರು ಹಾಗೂ ವೈದ್ಯರ ತಂಡ ಕಳುಹಿಸಿಕೊಟ್ಟಿದೆ.

ಆದರೆ ಈಗ ಇಬ್ಬರು ನಟಿಯರ ಕೂದಲು ವಾಪಸ್ಸು ಬಂದಿದೆ ಎನ್ನಲಾಗಿದ್ದು, ಕೂದಲ ಸ್ಯಾಂಪಲ್ ಅನ್ನು ನಿಯಮಾವಳಿ ಪ್ರಕಾರ ಪ್ಯಾಕಿಂಗ್ ಮಾಡದೇ, ಸಿಲ್ವರ್ ಕವರ್‌ನಲ್ಲಿ ಪ್ಯಾಕ್ ಮಾಡಿ ಟೆಸ್ಟ್‌ಗೆ ಕಳಿಸಲಾಗಿದೆ ಎಂದು ಹೇಳಿ ಕೆಸಿ ಜನರಲ್ ಆಸ್ಪತ್ರೆಗೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಹಾಗೂ ವೈದ್ಯರ ಈ ಯಡವಟ್ಟಿನಿಂದಾಗಿ ಹೀಗಾಯಿತೇ ಎಂದು ಮುಂದೆ ತಿಳಿಯಬೇಕಿದೆ.

- Advertisement -

Latest News

error: Content is protected !!