Wednesday, June 3, 2026
Homeಕ್ರೀಡೆನಿನ್ನೆಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್, ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ

ನಿನ್ನೆಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್, ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ

- Advertisement -
- Advertisement -

ನವದೆಹಲಿ : ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ರಾತ್ರಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ವಿರುದ್ಧ 97 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ನಾಯಕನಾಗಿ ಕೊಹ್ಲಿ ನಿನ್ನೆ ಯಾವುದೇ ರೀತಿಯಲ್ಲೂ ಉತ್ತಮ ಪ್ರದರ್ಶನ ತೋರಿರಲಿಲ್ಲ.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಈ ಋತುವಿನಲ್ಲಿ ಆರ್‌ಸಿಬಿ ಸ್ಲೋ ಓವರ್‌ರೇಟ್ ವಿಚಾರದಲ್ಲಿ ಮಾಡಿರುವ ಮೊದಲ ತಪ್ಪು ಇದಾಗಿದೆ. ಹೀಗಾಗಿ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಕೊಹ್ಲಿ ದುಬೈ ಅಂತರ್‌ರಾಷ್ಟ್ರೀಯ ಸ್ಟೇಡಿಯಂನಲ್ಲಿ ಶತಕವೀರ ರಾಹುಲ್ ನೀಡಿದ್ದ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದು ತಂಡಕ್ಕೆ ದುಬಾರಿಯಾಯಿತು.

- Advertisement -

Latest News

error: Content is protected !!