Sunday, June 7, 2026
Homeತಾಜಾ ಸುದ್ದಿ"ಲೈಂಗಿಕ ಕಾರ್ಯಕರ್ತರ ಹಸಿವನ್ನು ಮೊದಲು ನೀಗಿಸಿ" ಸುಪ್ರೀಂ ಕೋರ್ಟ್ ನಿಂದ ಘನತೆವೆತ್ತ ತೀರ್ಪು

“ಲೈಂಗಿಕ ಕಾರ್ಯಕರ್ತರ ಹಸಿವನ್ನು ಮೊದಲು ನೀಗಿಸಿ” ಸುಪ್ರೀಂ ಕೋರ್ಟ್ ನಿಂದ ಘನತೆವೆತ್ತ ತೀರ್ಪು

- Advertisement -
- Advertisement -

ನವದೆಹಲಿ: ಕೊರೋನಾ ಲಾಕ್ ಡೌನ್ ಪರಿಣಾಮ ಹಲವು ಕ್ಷೇತ್ರಗಳು ಸಂಕಷ್ಟ ಎದುರಿಸುತ್ತಿವೆ. ಈ ಸಾಲಿನಲ್ಲಿ ಲೈಂಗಿಕ ಕಾರ್ಯಕರ್ತರು ಸೇರಿದ್ದು ಒಪ್ಪತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ಈ ವಿಚಾರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಒಂದು ವಾರದೊಳಗೆ ಆಯಾ ರಾಜ್ಯಗಳು ಸೆಕ್ಸ್ ವರ್ಕ್‌ರ್‌ ಗಳಿಗೆ ಪಡಿತರ ವಿತರಣೆ ಮಾಡಬೇಕು, ಕೇಂದ್ರ ಸರ್ಕಾರ ವಿಪತ್ತು ನಿರ್ವಹಣೆಯಡಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಎಲ್ಎ‌ನ್ ರಾವ್ ಮಮತ್ತು ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠ ಈ ಘನತೆವೆತ್ತ ತೀರ್ಪು ನೀಡಿದ್ದು, ಇದೊಂದು ಸಮಸ್ಯೆಯಾಗಿ ಗೋಚರವಾಗುತ್ತಿದ್ದು ರೇಶನ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಅವರು ಉಪವಾಸ ಇರಲು ಸಾಧ್ಯವಿಲ್ಲ ಎಂದು ಹೇಳಿದೆ.ದರ್ವಾರ್ ಮಹಿಳಾ ಸಮನ್ವಯ ಸಮಿತಿ ಸುಪ್ರೀಂಗೆ ಅರ್ಜಿಯೊಂದನ್ನು ಸಲ್ಲಿಸಿತ್ತು. ಮಾರ್ಚ್ ಲಾಕ್ ಡೌನ್ ಘೋಷಣೆಯಾದಾಗಲೆ ಈ ವರ್ಗ ಸಮಸ್ಯೆಗೆ ಸಿಲುಕಿಕೊಂಡಿತ್ತು. ಸುಪ್ರೀಂ ಕೋರ್ಟ್ ಹೊರಡಿಸಿದ ಈ ತೀರ್ಪು ಲೈಂಗಿಕ ಕಾರ್ಯಕರ್ತರ ಸಮಸ್ಯೆಯನ್ನು ಕೊಂಚ ಕಡಿಮೆಯಾಗಿಸಿದೆ.

- Advertisement -

Latest News

error: Content is protected !!