Saturday, June 13, 2026
Homeಕರಾವಳಿಉಡುಪಿಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಕಿಶೋರ್ ಬಂಟ ಸಮುದಾಯದವನೇ ಅಲ್ಲ : ಸಿಸಿಬಿ ವಿಚಾರಣೆಯಲ್ಲಿ ಗೊತ್ತಾಯ್ತು ಡ್ಯಾನ್ಸರ್...

ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಕಿಶೋರ್ ಬಂಟ ಸಮುದಾಯದವನೇ ಅಲ್ಲ : ಸಿಸಿಬಿ ವಿಚಾರಣೆಯಲ್ಲಿ ಗೊತ್ತಾಯ್ತು ಡ್ಯಾನ್ಸರ್ ನ ಅಸಲಿ ಮುಖ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನ ಡ್ಯಾನ್ಸರ್, ಬಾಲಿವುಡ್ ನಟ ಕಿಶೋರ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿರೋದು ಗೊತ್ತೇ ಇದೆ. ಈತನ ಬಂಧನದಲ್ಲಿ ಆತನ ಒಂದೇ ಮುಖಗಳು ಬಯಲಾಗುತ್ತಿವೆ.

ಇದೀಗ ಆತನ ವಿಚಾರಣೆ ವೇಳೆ ಆತ ಬಂಟ ಸಮುದಾಯಕ್ಕೆ ಸೇರಿದವನೇ ಅಲ್ಲ ಅನ್ನೋದು ಗೊತ್ತಾಗಿದೆ. ಅಷ್ಟಕ್ಕೂ ಆತನ ಹೆಸರಿನ ಮುಂದೆ ಶೆಟ್ಟಿ ಅನ್ನೋದು ಹೇಗೆ ಬಂತು ಅಂತಾ ನಿಮಗೆಲ್ಲಾ ಅಚ್ಚರಿ ಆಗ್ಬೋದು. ಅಂದ್ಹಾಗೆ ಆತನೇ ತನ್ನ ಹೆಸರಿನ ಮುಂದೆ ಶೆಟ್ಟಿ ಅನ್ನೋ ಸರ್ ನೇಮ್ ನ್ನು ಸೇರಿಕೊಂಡಿದ್ದ. ಅದಕ್ಕೆ ಕಾರಣ ಬಾಲಿವುಡ್ ನಲ್ಲಿ ಶೆಟ್ಟಿ ಅನ್ನೋ ಹೆಸರಿಗೆ ಹೆಚ್ಚು ಮರ್ಯಾದೆ ಸಿಗುತ್ತೆ ಅನ್ನೋ ಆತನ ಲೆಕ್ಕಾಚಾರ. ಶೆಟ್ಟಿ ಅನ್ನೋ ಸರ್ ನೇಮ್ ಇದ್ರೆ ಬಾಲಿವುಡ್ ಒಳ್ಳೆ ಹೆಸರು ಮಾಡಬಹುದು. ಹಾಗೇ ಒಳ್ಳೊಳ್ಳೆ ಅವಕಾಶಗಳು ಸಿಗುತ್ತವೆ ಅನ್ನೋ ಕಾರಣಕ್ಕೆ ಹೆಸರಿನ ಮುಂದೆ ಶೆಟ್ಟಿ ಅಂತಾ ಸೇರಿಸಿಕೊಂಡಿದ್ದ ಅನ್ನೋದು ಸಿಸಿಬಿ ವಿಚಾರಣೆ ವೇಳೆ ಗೊತ್ತಾಗಿದೆ.

- Advertisement -

Latest News

error: Content is protected !!