Monday, June 15, 2026
Homeತಾಜಾ ಸುದ್ದಿನಟಿ ರಾಗಿಣಿ ಹಾಗೂ ಸಂಜನಾ ಕೋವಿಡ್ ಟೆಸ್ಟ್ ವರದಿಯಲ್ಲೇನಿದೆ ಗೊತ್ತಾ?

ನಟಿ ರಾಗಿಣಿ ಹಾಗೂ ಸಂಜನಾ ಕೋವಿಡ್ ಟೆಸ್ಟ್ ವರದಿಯಲ್ಲೇನಿದೆ ಗೊತ್ತಾ?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.

ಆರೋಪಿಗಳಾದ ನಟಿ ರಾಗಿಣಿ ಹಾಗೂ ಸಂಜನಾ ಅವರ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಲಿರುವ ಹಿನ್ನಲೆಯಲ್ಲಿ ಕೋರ್ಟ್ ಗೆ ಹಾಜರು ಪಡಿಸುವುದಕ್ಕೂ ಮುನ್ನ ಇಬ್ಬರು ನಟಿಯರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಕೊರೊನಾ ಟೆಸ್ಟ್ ಕೂಡ ಮಾಡಲಾಗಿದ್ದು, ಇಬ್ಬರ ವರದಿಯಲ್ಲೂ ನೆಗೆಟಿವ್ ಬಂದಿದೆ.

ವೈದ್ಯಕೀಯ ತಪಾಸಣೆ ಬಳಿಕ ಇಬ್ಬರು ನಟಿಯರನ್ನು ಸಿಸಿಬಿ ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದು, ಮಧ್ಯಾಹ್ನದ ಬಳಿಕ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ. ಇಂದು ನ್ಯಾಯಾಲಯ ನಟಿಯರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುತ್ತಾ ಇಲ್ಲವೇ ಪೊಲೀಸ್ ಕಸ್ಟಡಿಗೆ ವಹಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

- Advertisement -

Latest News

error: Content is protected !!