Friday, June 5, 2026
Homeಕರಾವಳಿಮಂಗಳೂರು ವಿ.ವಿ ಪದವಿ ಪರೀಕ್ಷೆ: ಗಡಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸಾರಿಗೆ ಸಮಸ್ಯೆ

ಮಂಗಳೂರು ವಿ.ವಿ ಪದವಿ ಪರೀಕ್ಷೆ: ಗಡಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸಾರಿಗೆ ಸಮಸ್ಯೆ

- Advertisement -
- Advertisement -

ಮಂಗಳೂರು: ಸೆ.16ರಿಂದ ಮಂಗಳೂರು ವಿ.ವಿ ಪದವಿ ಪರೀಕ್ಷೆ ಆರಂಭವಾಗಲಿದ್ದು ಪರೀಕ್ಷೆಗೆ ಹಾಜರಾಗಲು ಗಡಿಪ್ರದೇಶದಲ್ಲಿ ವಾಸ್ತವ್ಯವಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ನಡುವಿನ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಪರ್ಕ ಪುನರಾರಂಭಗೊಂಡಿಲ್ಲ.

ಹಲವು ಸಂಖ್ಯೆಯ ವಿದ್ಯಾರ್ಥಿ ಗಳು ಗಡಿ ಭಾಗದಲ್ಲಿದ್ದು ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಕೊರೋನಾ ಸಮಸ್ಯೆ, ಅನಾರೋಗ್ಯದ ಸಮಸ್ಯೆ ಇದ್ದವರಿಗೆ ವಿ.ವಿ ನಂತರದಲ್ಲಿ ವಿಶೇಷ ಪರೀಕ್ಷೆಗೆ ಅನುಮತಿ ನೀಡಲಿದೆಯಾದರೂ ಸಾರಿಗೆ ಸಮಸ್ಯೆಗೆ ಇದು ಅನ್ವಯಿಸುವುದಿಲ್ಲ. ಈ ಕುರಿತು ಸಂಬಂಧ ಪಟ್ಟವರು ಶೀಘ್ರ ಸಮರ್ಪಕ ವ್ಯವಸ್ಥೆ ಒದಗಿಸುವ ಅನಿವಾರ್ಯತೆಇದೆ.

- Advertisement -

Latest News

error: Content is protected !!