Wednesday, June 3, 2026
Homeತಾಜಾ ಸುದ್ದಿಮೇಘನಾ ರಾಜ್ ಮನೆಯಲ್ಲಿ ಹಿರಿಯ ನಟಿಯರ ಮಸಾಲಾ ದೋಸೆ ಪಾರ್ಟಿ...

ಮೇಘನಾ ರಾಜ್ ಮನೆಯಲ್ಲಿ ಹಿರಿಯ ನಟಿಯರ ಮಸಾಲಾ ದೋಸೆ ಪಾರ್ಟಿ…

- Advertisement -
- Advertisement -

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಆಗಲಿಕೆಯ ಬಳಿಕ ಮೇಘನಾ ರಾಜ್ ಅವರು ಅಕ್ಷರಶಃ ಕುಸಿದು ಹೋಗಿದ್ದಾರೆ. ಅದರಲ್ಲೂ ಡ್ರಗ್ಸ್ ಪ್ರಕರಣದಲ್ಲಿ ಚಿರು ಹೆಸರರು ತಳುಕು ಹಾಕಿಕೊಂಡ ಬಳಿಕ ಮೇಘನಾ ರಾಜ್ ಇನ್ನಷ್ಟು ಡಲ್ ಆಗಿದ್ದಾರೆ. ಹಾಗಾಗಿ ಅವರ ಮುಖದಲ್ಲಿ ನಗು ತರಿಸೋದಕ್ಕೆ ಎಲ್ಲರೂ ಹರ ಸಾಹಸ ಪಡುತ್ತಿದ್ದಾರೆ.

ಅಲ್ಲದೇ, ಎಲ್ಲರಿಗೂ ಗೊತ್ತಿರುವಂತೆ ಚಿರು ಪತ್ನಿ ಮೇಘನಾ ರಾಜ್​ ತುಂಬು ಗರ್ಭಿಣಿ. ಇನ್ನೇನು ಕೆಲ ದಿನಗಳಲ್ಲಿ ಅಮ್ಮನಾಗಲಿದ್ದಾರೆ. ತಾಯ್ತನದ ಸಂದರ್ಭದಲ್ಲಿ ಹೇಗಿರಬೇಕು ಎಂಬ ಒಂದಷ್ಟು ಸಲಹೆಗಳನ್ನು ಮತ್ತು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ನಟಿಯರಾದ ಶ್ರುತಿ, ಸುಧಾರಾಣಿ ಮತ್ತು ಮಾಳವಿಕಾ ಅವಿನಾಶ್​ ಜೆಪಿ ನಗರದ ಮೇಘನಾ ಮನೆಗೆ ತೆರಳಿ ಬಂದಿದ್ದಾರೆ.

ಮೇಘನಾ ಜತೆಗೆ ಒಂದಷ್ಟು ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡು, ಪ್ರಮೀಳಾ ಜೋಷಾಯ್​ ಮಾಡಿದ ಮಸಾಲೆ ದೋಸೆಯನ್ನು ಸವಿದು ಬಂದಿದ್ದಾರೆ. ಜೊತೆಗೆ ಮೇಘನಾಗೆ ಧೈರ್ಯ ಹೇಳಿದ್ದಾರೆ.

- Advertisement -

Latest News

error: Content is protected !!