Thursday, June 4, 2026
Homeತಾಜಾ ಸುದ್ದಿಮುಂಬೈ: ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ್ದ ಖ್ಯಾತ ಉದ್ಯಮಿ

ಮುಂಬೈ: ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ್ದ ಖ್ಯಾತ ಉದ್ಯಮಿ

- Advertisement -
- Advertisement -

ಮುಂಬೈ: ಲಿಫ್ಟ್ ಕೆಳಗೆ ಸಿಲುಕಿ ಮುಂಬೈನ ರಿಟೇಲ್ ಚೈನ್ ಕೊಹಿನೂರು ಎಲೆಕ್ಟ್ರಾನಿಕ್ಸ್ ನಿದೇರ್ಶಕ ವಿಶಾಲ್ ಮೇವಾನಿ ಸಾವನ್ನಪ್ಪಿರುವ ಘಟನೆ ವರ್ಲಿಯಲ್ಲಿ ನಡೆದಿದೆ.

ಭಾನುವಾರ ತಮ್ಮ ಕೆಲಸಗಳನ್ನು ಮುಗಿಸಿಕೊಂಡ ವಿಶಾಲ್ ಭಾನುವಾರ ಸಂಜೆ ಗೆಳೆಯನನ್ನ ಭೇಟಿಯಾಗಲು ಮಗಳು ರೇಷ್ಮಾ ಜೊತೆ ಮುಂಬೈನ ವರ್ಲಿಗೆ ಬಂದಿದ್ದರು. ಗೆಳೆಯ ಎರಡನೇ ಮಹಡಿಯಲ್ಲಿದ್ದರಿಂದ ಮೇಲೆ ಹೋಗಲು ಲಿಫ್ಟ್ ಬಟನ್ ಒತ್ತಿದ್ದಾರೆ. ಆದ್ರೆ ಲಿಫ್ಟ್ ಕೆಳಗೆ ಬರೋಷ್ಟರಲ್ಲಿ ಡೋರ್ ಒಪನ್ ಆಗಿದ್ದರಿಂದ ಒಳಗೆ ಬಂದಿದ್ದಾರೆ.

ಲಿಫ್ಟ್ ಮೇಲೆ ಬರೋದನ್ನ ಗಮನಿಸಿದ ವಿಶಾಲ್ ಎಚ್ಚೆತ್ತುಕೊಂಡು ಹೊರ ಬರುವಷ್ಟರಲ್ಲಿಯೇ ಲಿಫ್ಟ್ ಅವರ ಮೇಲೆ ಅಪ್ಪಳಿಸಿದೆ. ಪರಿಣಾಮ ಲಿಫ್ಟ್ ಕೆಳಗೆ ಸಿಲುಕಿದ ವಿಶಾಲ್ ಅಪ್ಪಚ್ಚಿಯಾಗಿದ್ದರು. ಕೂಡಲೇ ವಿಶಾಲ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವೈದ್ಯರು ವಿಶಾಲ್ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಇನ್ನು ವಿಶಾಲ್ ಜೊತೆಯಲ್ಲಿದ್ದ ಅವರ ಮಗಳು ರೇಷ್ಮಾ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ.

- Advertisement -

Latest News

error: Content is protected !!