Thursday, June 4, 2026
Homeಕರಾವಳಿನಟಿ ರಾಧಿಕಾ ಕುಮಾರಸ್ವಾಮಿಯಿಂದ ದೂರು ದಾಖಲು: ಯಾರ ವಿರುದ್ಧ ?

ನಟಿ ರಾಧಿಕಾ ಕುಮಾರಸ್ವಾಮಿಯಿಂದ ದೂರು ದಾಖಲು: ಯಾರ ವಿರುದ್ಧ ?

- Advertisement -
- Advertisement -

ಬೆಂಗಳೂರು: ಯೂಟ್ಯೂಬ್ ಗೆ ‘ಸ್ವೀಟಿ ನನ್ನ ಜೋಡಿ’ ಸಿನಿಮಾ ಅಪ್ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾವು ನಟಿಸಿ, ನಿರ್ಮಿಸಿದ್ದ ‘ಸ್ವೀಟಿ ನನ್ನ ಜೋಡಿ’ ಚಲನಚಿತ್ರವನ್ನು ಅಕ್ರಮವಾಗಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 2013 ರಲ್ಲಿ ರಾಧಿಕಾ ಕುಮಾರಸ್ವಾಮಿ ‘ಸ್ವೀಟಿ ನನ್ನ ಜೋಡಿ’ ಎನ್ನುವ ಸಿನಿಮಾ ನಿರ್ಮಿಸಿದ್ದರು.

3 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸ್ವೀಟಿ ಸಿನಿಮಾವನ್ನು ಯಾರೋ ಅಪರಿಚಿತರು ನನ್ನ ಅನುಮತಿ ಪಡೆಯದೇ ಹಾಗೂ ಗಮನಕ್ಕೆ ತರದೇ ಯೂಟ್ಯೂಬ್ ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುವ ಮೂಲಕ ಪೈರಸಿ ಮಾಡಿದ್ದಾರೆ ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!