Thursday, August 27, 2026
Homeಇತರದೇವಸ್ಥಾನದಲ್ಲಿ ಕೈ ಮುಗಿಯುತ್ತಿದ್ದ ವೇಳೆಯೇ ವ್ಯಕ್ತಿಯ ಕೊಲೆ

ದೇವಸ್ಥಾನದಲ್ಲಿ ಕೈ ಮುಗಿಯುತ್ತಿದ್ದ ವೇಳೆಯೇ ವ್ಯಕ್ತಿಯ ಕೊಲೆ

- Advertisement -
- Advertisement -

ರಾಯಚೂರು: ತಾಲೂಕಿನ ಪುಚ್ಚಲದಿನ್ನಿ ಗ್ರಾಮದಲ್ಲಿ ಪಕ್ಕದ ಮನೆಯ ವ್ಯಕ್ತಿಯು ದೇವಸ್ಥಾನದಲ್ಲಿ ನಮಸ್ಕರಿಸುತ್ತಿದ್ದ ವೇಳೆ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ನಂದಯ್ಯ ಸ್ವಾಮಿ (40) ಕೊಲೆಗೀಡಾಗಿದ್ದು, ಪತ್ನಿ ಹಾಗೂ ಮೂವರ ಮಕ್ಕಳ ರೋಧನ ಮುಗಿಲು ಮುಟ್ಟಿದೆ. ಕೊಲೆ ಮಾಡಿರುವ ಚನ್ನಯ್ಯ ಸ್ವಾಮಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಇಡಪನೂರು ಠಾಣೆ ಪೊಲೀಸರಿಗೆ ಸುದ್ದಿ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚನ್ನಯ್ಯಸ್ವಾಮಿ‌ ಮಾನಸಿಕ ಅಸ್ವಸ್ಥನಾಗಿದ್ದು, ಕೊಲೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!