Saturday, June 6, 2026
Homeತಾಜಾ ಸುದ್ದಿಕೊಟ್ಟ ಮಾತು ಉಳಿಸಿಕೊಂಡ ಸೋನು ಸೂದ್, ಬೀದಿ ಬದಿಯಲ್ಲಿ ಮಾರ್ಷಲ್ ಆರ್ಟ್ ಪ್ರದರ್ಶಿಸುತ್ತಿದ್ದ ಅಜ್ಜಿಯ ಕನಸು...

ಕೊಟ್ಟ ಮಾತು ಉಳಿಸಿಕೊಂಡ ಸೋನು ಸೂದ್, ಬೀದಿ ಬದಿಯಲ್ಲಿ ಮಾರ್ಷಲ್ ಆರ್ಟ್ ಪ್ರದರ್ಶಿಸುತ್ತಿದ್ದ ಅಜ್ಜಿಯ ಕನಸು ನನಸಾಗಿದ ಸೋನು …

- Advertisement -
- Advertisement -

 ಮಹಾರಾಷ್ಟ್ರ  ಕೆಲವು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಮಾರ್ಷಲ್ ಆರ್ಟ್ ಕಲೆಯನ್ನು ಪ್ರದರ್ಶಿಸುತ್ತಿದ್ದ ಶಾಂತಾ ಪವಾರ್ ಅನ್ನೋ ಅಜ್ಜಿಯ ವಿಡಿಯೋ ಸೋಷಿಯಲ್ ಮೀಡಿಯಾಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಾವು ನಮ್ಮ ಮಹಾ ಎಕ್ಸ್ಪ್ರೆಸ್ ನಲ್ಲೂ ಆ ಅಜ್ಜಿಯ ಬಗ್ಗೆ ಹೇಳಿದ್ವಿ. ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯ ವಿಡಿಯೋ ನೋಡಿದ ನಚ ಸೋನು ಸೂದ್ ಅಜ್ಜಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು, ಇದೀಗ ಕೊಟ್ಟ ಮಾತಿನಂತೆ ಸೋನು ನಡೆದುಕೊಂಡಿದ್ದಾರೆ.

ಅವರು ಕೊಟ್ಟ ಮಾತಿನಂತೆ  ಅಜ್ಜಿಗೆ ಮಾರ್ಷಲ್​ ಆರ್ಟ್ಸ್​ ಶಾಲೆ ವ್ಯವಸ್ಥೆ ಮಾಡಿದ್ದಾರೆ. ಹೌದು.. ಅಜ್ಜಿಯ ಜೀವರಕ್ಷಕ ಕಲೆಗಾಗಿ ಶಾಲೆ ತೆರೆಯಬೇಕೆಂಬ ಕನಸನ್ನು ಸೋನು ಸೂದ್​ ನನಸು ಮಾಡಿಕೊಟ್ಟಿದ್ದಾರೆ. ಸದ್ಯ ಶಾಂತಾ ಪವಾರ್, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮಾರ್ಷಲ್​ ಆರ್ಟ್ಸ್​ ಕಲಿಸಿಕೊಡುವಲ್ಲಿ ಶಾಂತಾ ಪವಾರ್ ತೊಡಗಿಸಿಕೊಂಡಿದ್ದಾರೆ.

ಅಚ್ಚರಿ ಅಂದ್ರೆ, ಮಾರ್ಷಲ್​ ಆರ್ಟ್ಸ್​ ಶಾಲೆಗೆ ಸೋನು ಸೂದ್​ ಅವರ ಹೆಸರನ್ನೇ ಇಟ್ಟಿದ್ದಾರೆ ಶಾಂತಾ ಪವಾರ್. ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ನೆನಪಿನಲ್ಲಿಯೇ ಶಾಲೆ ಮುಂದುವರಿಯಲಿ. ಹಾಗಾಗಿ ಅದಕ್ಕೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ. ಆದಷ್ಟು ಬೇಗ ಒಂದು ಬಾರಿ ಭೇಟಿ ನೀಡಿ’ ಎಂದು ವಿಡಿಯೋ ಮೂಲಕ ಶಾಂತಾ ಪವಾರ್ ಕೋರಿದ್ದಾರೆ. 

- Advertisement -

Latest News

error: Content is protected !!