Wednesday, November 25, 2026
Homeಕರಾವಳಿರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಎಚ್ಚರಿಕೆ!; ಕೊಂಕಣ ರೈಲ್ವೆಯಿಂದ ತಪಾಸಣೆ ಚುರುಕು; 17.31 ಕೋಟಿ ರೂ....

ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಎಚ್ಚರಿಕೆ!; ಕೊಂಕಣ ರೈಲ್ವೆಯಿಂದ ತಪಾಸಣೆ ಚುರುಕು; 17.31 ಕೋಟಿ ರೂ. ದಂಡ ವಸೂಲಿ

- Advertisement -
- Advertisement -

ಉಡುಪಿ: ಟಿಕೆಟ್ ಇಲ್ಲದೆ ಮತ್ತು ಅನಧಿಕೃತವಾಗಿ ರೈಲಿನಲ್ಲಿ ಪ್ರಯಾಣಿಸುವುದನ್ನು ತಡೆಯಲು ಕೊಂಕಣ ರೈಲ್ವೆ ತನ್ನ ಮಾರ್ಗದಲ್ಲಿ ಟಿಕೆಟ್ ತಪಾಸಣೆಯನ್ನು ಹೆಚ್ಚಿಸಿದೆ.

2026ರ ಏಪ್ರಿಲ್ 1ರಿಂದ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 6,316 ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಈ ವೇಳೆ 2,62,937 ಮಂದಿ ಟಿಕೆಟ್ ಇಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಪ್ರಯಾಣಿಸಿರುವುದು ಪತ್ತೆಯಾಗಿದೆ. ಅವರಿಂದ ರೈಲ್ವೆ ದರ ಮತ್ತು ದಂಡ ಸೇರಿ ಒಟ್ಟು 17.31 ಕೋಟಿ ರೂ. ವಸೂಲಿ ಮಾಡಲಾಗಿದೆ.

ಅಕ್ಟೋಬರ್ ತಿಂಗಳೊಂದರಲ್ಲೇ 890 ವಿಶೇಷ ತಪಾಸಣೆ ನಡೆಸಿ, 29,536 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಮೂಲಕ 2.15 ಕೋಟಿ ರೂ. ಸಂಗ್ರಹಿಸಲಾಗಿದೆ.

ಮುಂಬರುವ ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ರೈಲ್ವೆ ರಕ್ಷಣಾ ಪಡೆ ಮತ್ತು ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರಯಾಣಿಕರು ಮಾನ್ಯ ಟಿಕೆಟ್ ಪಡೆದು ಪ್ರಯಾಣಿಸಬೇಕು ಹಾಗೂ ತಪಾಸಣೆ ವೇಳೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಕೊಂಕಣ ರೈಲ್ವೆ ಮನವಿ ಮಾಡಿದೆ.

- Advertisement -

Latest News

error: Content is protected !!