Wednesday, November 25, 2026
Homeಕರಾವಳಿವಂದೇ ಭಾರತ್ ರೈಲಿನಲ್ಲಿ ಕಳೆದುಹೋದ ಚಿನ್ನದ ಬ್ರೇಸ್‌ಲೆಟ್!; ವಾರಸುದಾರರಿಗೆ ಹಿಂದಿರುಗಿಸಿದ ಆರ್‌ಪಿಎಫ್ ಸಿಬ್ಬಂದಿ

ವಂದೇ ಭಾರತ್ ರೈಲಿನಲ್ಲಿ ಕಳೆದುಹೋದ ಚಿನ್ನದ ಬ್ರೇಸ್‌ಲೆಟ್!; ವಾರಸುದಾರರಿಗೆ ಹಿಂದಿರುಗಿಸಿದ ಆರ್‌ಪಿಎಫ್ ಸಿಬ್ಬಂದಿ

- Advertisement -
- Advertisement -

ಮಂಗಳೂರು: ವಂದೇ ಭಾರತ್ ರೈಲಿನಲ್ಲಿ ಕಳೆದುಹೋಗಿದ್ದ ಸುಮಾರು ₹50,000 ಮೌಲ್ಯದ ಚಿನ್ನದ ಬ್ರೇಸ್‌ಲೆಟ್ ಅನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನವೆಂಬರ್ 17ರಂದು ತಿರುವನಂತಪುರಂ–ಮಂಗಳೂರು ಸೆಂಟ್ರಲ್ ವಂದೇ ಭಾರತ್ ರೈಲು ಮಂಗಳೂರು ನಿಲ್ದಾಣ ತಲುಪಿದಾಗ, ಸಿ-15 ಬೋಗಿಯಲ್ಲಿ ಚಿನ್ನದ ಬ್ರೇಸ್‌ಲೆಟ್ ಪತ್ತೆಯಾಗಿತ್ತು. ವಾರಸುದಾರರು ಯಾರೂ ಬಾರದ ಕಾರಣ ಆರ್‌ಪಿಎಫ್ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಠಾಣೆಯಲ್ಲಿ ಇರಿಸಿದ್ದರು. ಬಳಿಕ ಬ್ರೇಸ್‌ಲೆಟ್‌ನ ಮಾಲೀಕರನ್ನು ಪತ್ತೆಹಚ್ಚಲು ರೈಲಿನ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿದರು. ಐಆರ್‌ಸಿಟಿಸಿ ಮೂಲಕ ಪಡೆದ ಮಾಹಿತಿಯ ಆಧಾರದ ಮೇಲೆ ಎರ್ನಾಕುಲಂನಿಂದ ಮಂಗಳೂರಿಗೆ ಪ್ರಯಾಣಿಸಿದ್ದ ರಜನಿ ಮನೋಹರ್ ನಾಯಕ್ ಅವರನ್ನು ಸಂಪರ್ಕಿಸಿದರು.

ಈ ವೇಳೆ ಪ್ರಯಾಣದ ಸಂದರ್ಭದಲ್ಲಿ ತಮ್ಮ ಚಿನ್ನದ ಬ್ರೇಸ್‌ಲೆಟ್ ಕಾಣೆಯಾಗಿರುವುದನ್ನು ರಜನಿ ಖಚಿತಪಡಿಸಿದರು. ಆದರೆ, ಅದು ಎಲ್ಲಿ ಕಳೆದುಹೋಯಿತು ಎಂಬುದು ತಿಳಿಯದ ಕಾರಣ ದೂರು ನೀಡಿರಲಿಲ್ಲ ಎಂದು ತಿಳಿಸಿದರು. ನವೆಂಬರ್ 24ರಂದು ಮಂಗಳೂರು ಸೆಂಟ್ರಲ್‌ನ ಆರ್‌ಪಿಎಫ್ ಠಾಣೆಗೆ ಭೇಟಿ ನೀಡಿದ ರಜನಿ ಅವರಿಗೆ ಪರಿಶೀಲನೆಯ ಬಳಿಕ ಚಿನ್ನದ ಬ್ರೇಸ್‌ಲೆಟ್ ಅನ್ನು ಹಸ್ತಾಂತರಿಸಲಾಯಿತು.

ಕಳೆದುಹೋಗಿದ್ದ ಆಭರಣವನ್ನು ಪತ್ತೆಹಚ್ಚಿ ಮರಳಿಸಿದ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯಕ್ಕೆ ರಜನಿ ಕೃತಜ್ಞತೆ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆಯೂ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯವನ್ನು ಶ್ಲಾಘಿಸಿದೆ.

- Advertisement -

Latest News

error: Content is protected !!