Tuesday, November 24, 2026
Homeಕರಾವಳಿಉಡುಪಿಮಣಿಪಾಲ–ಪೆರಂಪಳ್ಳಿ ರಸ್ತೆಯಲ್ಲಿ ಟಿಪ್ಪರ್‌ ಕಾರಿನ ನಡುವೆ ಢಿಕ್ಕಿ; ಡಿವೈಡರ್ ಮೇಲೇರಿದ ಟಿಪ್ಪರ್

ಮಣಿಪಾಲ–ಪೆರಂಪಳ್ಳಿ ರಸ್ತೆಯಲ್ಲಿ ಟಿಪ್ಪರ್‌ ಕಾರಿನ ನಡುವೆ ಢಿಕ್ಕಿ; ಡಿವೈಡರ್ ಮೇಲೇರಿದ ಟಿಪ್ಪರ್

- Advertisement -
- Advertisement -

ಉಡುಪಿ: ಮಣಿಪಾಲ–ಪೆರಂಪಳ್ಳಿ ರಸ್ತೆಯಲ್ಲಿ ಕೆಂಪು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್ ರಸ್ತೆ ವಿಭಜಕದ ಮೇಲೆ ಏರಿದ್ದು, ಕಾರು ಜಖಂಗೊಂಡಿದೆ.

ಅಪಘಾತದ ಪರಿಣಾಮ ಟಿಪ್ಪರ್‌ನಲ್ಲಿದ್ದ ಕೆಂಪು ಕಲ್ಲುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದವರು ರಸ್ತೆಯಲ್ಲಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!