Wednesday, November 25, 2026
Homeಕರಾವಳಿಮಂಗಳೂರುಬಂಟ್ವಾಳ; ನಕಲಿ ಚಿನ್ನ ನೀಡಿ ರೂ. 3.80 ಲಕ್ಷ ವಂಚನೆ ಯತ್ನ: ಹಲ್ಲೆ ಆರೋಪ

ಬಂಟ್ವಾಳ; ನಕಲಿ ಚಿನ್ನ ನೀಡಿ ರೂ. 3.80 ಲಕ್ಷ ವಂಚನೆ ಯತ್ನ: ಹಲ್ಲೆ ಆರೋಪ

- Advertisement -
- Advertisement -

ಬಂಟ್ವಾಳ: ಮಂಚಿ ಸಮೀಪದ ಕುಕ್ಕಾಜೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಚಿನ್ನದ ವ್ಯವಹಾರದ ಕಂಪನಿ ಉದ್ಯೋಗಿಗೆ ರೂ. 3.80 ಲಕ್ಷ ವಂಚಿಸಲು ಯತ್ನಿಸಿದ ಘಟನೆ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಖರೀದಿ-ಮಾರಾಟ ಕಂಪನಿಯ ಉದ್ಯೋಗಿ ಮಹೇಶ್ ಕುಮಾರ್ ಅವರು ನೀಡಿದ ದೂರಿನಂತೆ, ನವೆಂಬರ್ 18ರಂದು ಜಿಯಾದ್ ಎಂಬಾತ 37.2 ಗ್ರಾಂ ಚಿನ್ನ ಮಾರಾಟ ಮಾಡುವುದಾಗಿ ಸಂಪರ್ಕಿಸಿ ಆಧಾರ್ ವಿವರ ಹಾಗೂ ಆಭರಣಗಳ ಫೋಟೋ ಕಳುಹಿಸಿದ್ದ. ಇದನ್ನು ನಂಬಿ ನವೆಂಬರ್ 20ರಂದು ಬಂದ ಮಹೇಶ್ ಕುಮಾರ್, ಸಹಕಾರಿ ಸಂಘವೊಂದರ ಮೂಲಕ ರೂ. 3.80 ಲಕ್ಷ ಪಾವತಿಸಿದ್ದಾರೆ.

ಆದರೆ ನೀಡಿದ ಆಭರಣಗಳು ಹಿಂದಿನ ಫೋಟೋಗಳಿಗೆ ಹೊಂದಿಕೆಯಾಗದ ಕಾರಣ ನಕಲಿ ಇರಬಹುದೆಂದು ಶಂಕಿಸಿ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಹಣ ನೀಡದೆ ಜಿಯಾದ್ ಪರಾರಿಯಾಗಲು ಯತ್ನಿಸಿದ್ದು, ಮಹೇಶ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!