Friday, November 20, 2026
Homeಪ್ರಮುಖ-ಸುದ್ದಿವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಕಾರು, ಬೈಕ್‌ಗಳಿಗೆ ಪದೇ ಪದೇ ಮಾಲಿನ್ಯ ತಪಾಸಣೆ ಬೇಕಿಲ್ಲ!

ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಕಾರು, ಬೈಕ್‌ಗಳಿಗೆ ಪದೇ ಪದೇ ಮಾಲಿನ್ಯ ತಪಾಸಣೆ ಬೇಕಿಲ್ಲ!

- Advertisement -
- Advertisement -

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸ BS-VI ಖಾಸಗಿ ಕಾರು ಮತ್ತು ಬೈಕ್‌ಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಪಡೆಯುವ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಹೊಸ ವಾಹನಗಳ ಮಾಲೀಕರು ಪದೇ ಪದೇ PUC ಪರೀಕ್ಷೆ ಮಾಡಿಸುವ ತೊಂದರೆಯಿಂದ ಮುಕ್ತಿ ಪಡೆಯಲಿದ್ದಾರೆ. ಆದರೆ ಈ ಸೌಲಭ್ಯ ಹಳೆಯ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ಅನ್ವಯಿಸುವುದಿಲ್ಲ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳ ಮಾಲಿನ್ಯ ಪ್ರಮಾಣ, ವಾಹನದ ಬಳಕೆ ಹಾಗೂ ಮೊದಲ ನೋಂದಣಿ ದಿನಾಂಕದ ಆಧಾರದ ಮೇಲೆ PUC ಪ್ರಮಾಣಪತ್ರದ ಅವಧಿಯನ್ನು ನಿಗದಿಪಡಿಸಿದೆ. ಕಡಿಮೆ ಮಾಲಿನ್ಯ ಉಂಟುಮಾಡುವ ಹೊಸ ವಾಹನಗಳಿಗೆ ಹೆಚ್ಚಿನ ಅವಧಿ ನೀಡುವ ಮೂಲಕ, ಹಳೆಯ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು ಇದರ ಉದ್ದೇಶವಾಗಿದೆ.

ಯಾವ ವಾಹನಕ್ಕೆ ಎಷ್ಟು ವರ್ಷ PUC ಅವಧಿ?

1. ಖಾಸಗಿ BS-VI ವಾಹನಗಳು (ಕಾರು ಮತ್ತು ಬೈಕ್):

6 ವರ್ಷದೊಳಗಿನ ವಾಹನಗಳು – 3 ವರ್ಷ
6ರಿಂದ 10 ವರ್ಷದೊಳಗಿನ ವಾಹನಗಳು – 1 ವರ್ಷ
10 ವರ್ಷ ಮೇಲ್ಪಟ್ಟ ವಾಹನಗಳು – 6 ತಿಂಗಳು

2. ವಾಣಿಜ್ಯ BS-VI ವಾಹನಗಳು (ಟ್ಯಾಕ್ಸಿ, ಬಸ್ ಮತ್ತು ಲಾರಿ):

6 ವರ್ಷದೊಳಗಿನ ವಾಹನಗಳು – 2 ವರ್ಷ
6ರಿಂದ 10 ವರ್ಷದೊಳಗಿನ ವಾಹನಗಳು – 1 ವರ್ಷ
10 ವರ್ಷ ಮೇಲ್ಪಟ್ಟ ವಾಹನಗಳು – 6 ತಿಂಗಳು

3. ಹಳೆಯ ವಾಹನಗಳು (ಖಾಸಗಿ ಮತ್ತು ವಾಣಿಜ್ಯ):

BS-IV ವಾಹನಗಳು – ಪ್ರತಿ 6 ತಿಂಗಳಿಗೊಮ್ಮೆ
BS-I, BS-II ಮತ್ತು BS-III ವಾಹನಗಳು – ಪ್ರತಿ 3 ತಿಂಗಳಿಗೊಮ್ಮೆ

ಒಂದೇ ಮಾದರಿಯ ಎರಡು ಕಾರುಗಳಿದ್ದರೂ ಅವುಗಳ PUC ಅವಧಿ ಒಂದೇ ಆಗಿರಬೇಕೆಂದಿಲ್ಲ. ವಾಹನ ಖಾಸಗಿಯೇ ಅಥವಾ ವಾಣಿಜ್ಯ ಬಳಕೆಯದ್ದೇ ಹಾಗೂ ಮೊದಲ ಬಾರಿಗೆ ಯಾವಾಗ ನೋಂದಣಿಯಾಗಿದೆ ಎಂಬುದರ ಆಧಾರದ ಮೇಲೆ ಪ್ರಮಾಣಪತ್ರದ ಅವಧಿ ನಿರ್ಧಾರವಾಗುತ್ತದೆ.

- Advertisement -

Latest News

error: Content is protected !!