Thursday, November 19, 2026
Homeಕರಾವಳಿಬೆಂಗಳೂರು:‘ಗೌಡೆರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ-2026’ಕ್ಕೆ ವಿಪಕ್ಷ ನಾಯಕ ಆರ್. ಅಶೋಕ್‌ಗೆ ಆಹ್ವಾನ

ಬೆಂಗಳೂರು:‘ಗೌಡೆರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ-2026’ಕ್ಕೆ ವಿಪಕ್ಷ ನಾಯಕ ಆರ್. ಅಶೋಕ್‌ಗೆ ಆಹ್ವಾನ

- Advertisement -
- Advertisement -

ಬೆಂಗಳೂರು: ಮುಂಬರುವ ‘ಗೌಡೆರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ-2026’ ಕಾರ್ಯಕ್ರಮಕ್ಕೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರನ್ನು ಸಂಘಟಕರು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕಾನೂನು ಸಲಹೆಗಾರ ನವೀನ್ ಬಿ.ಕೆ., ಯುವ ವೇದಿಕೆಯ ಉಪಾಧ್ಯಕ್ಷ ನಿತಿನ್ ಕಲ್ಮಂಜ ಹಾಗೂ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ನಿರ್ದೇಶಕ ಗಣೇಶ್ ಕಳಾಯಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!