- Advertisement -


- Advertisement -
ಸುಳ್ಯ: ತಾಲೂಕಿನ ಕಸಬಾ ಗ್ರಾಮದ ದುಗಲಡ್ಕದಲ್ಲಿ ಕಾರನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಕಾರಿನ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬುಧವಾರ (ನ.11) ನಡೆದಿದೆ.
ಮೃತರನ್ನು ಕಮಾರುನ್ನಿಸಾ (46) ಎಂದು ಗುರುತಿಸಲಾಗಿದೆ. ಅವರು ರಬ್ಬರ್ ಮೂರ್ತೆ ಕೆಲಸಕ್ಕೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
- Advertisement -


