Saturday, June 6, 2026
Homeಕರಾವಳಿಉಡುಪಿಲಾಡ್ಜ್ ನಲ್ಲಿ ಅಂದರ್ ಬಾಹರ್ ಆಟ- 14 ಮಂದಿಯ ಬಂಧನ

ಲಾಡ್ಜ್ ನಲ್ಲಿ ಅಂದರ್ ಬಾಹರ್ ಆಟ- 14 ಮಂದಿಯ ಬಂಧನ

- Advertisement -
- Advertisement -

ಕುಂದಾಪುರ: ಕರೋನಾ ಸಂಕಷ್ಟದಲ್ಲೂ ನಗರದ ಹೃದಯ ಭಾಗದ ಲಾಡ್ಜ್ ಒಂದರಲ್ಲಿ ರೂಮ್ ಪಡೆದು ಬಿಂದಾಸ್ ಆಗಿ
ಇಸ್ಫೀಟ್ ಜುಗಾರಿ‌ ಆಡುತ್ತಿದ್ದ 14 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ ಘಟನೆ  ನಡೆದಿದೆ.

ಸತೀಶ, ಗಣೇಶ, ರಮೇಶ ಮೊಗವೀರ, ರಾಘವೇಂದ್ರ ಶೇರಿಗಾರ್, ಚೇತನ್ ಮೊಗವೀರ, ಸಂದೀಪ, ರಾಘವೇಂದ್ರ, ವಾಸುದೇವ, ಮಾಧವ ಮರಕಾಲ, ವಿಜಯ ಕುಮಾರ್, ಶ್ರೀಕಾಂತ, ತೇಜ ಬಿಲ್ಲವ, ಶಿವ ಮೊಗವೀರ, ಶೇಖರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದು ಇವರಿಂದ 47370 ರೂ. ನಗದು, 11 ಮೊಬೈಲ್‌ಗಳನ್ನು ಹಾಗೂ ಇತರೆ ಪರಿಕರ ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ನಗರ ಠಾಣೆ ಪಿಎಸ್ಐ ಹರೀಶ್ ಆರ್ ಅವರಿಗೆ ಶಾಸ್ತ್ರೀಪಾರ್ಕ್ ಬಳಿಯ ಲಾಡ್ಜ್‌ ನ ರೂಮ್ ನಲ್ಲಿ ಇಸ್ಪೀಟ್‌ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ದೊರೆತಿದ್ದು ಠಾಣಾ ಸಿಬ್ಬಂದಿಗಳ‌ ಜೊತೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳ ಸಹಿತ ಜುಗಾರಿಗೆ ಬಳಸಲಾದ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ 

- Advertisement -

Latest News

error: Content is protected !!