Friday, November 6, 2026
Homeಅಪರಾಧಇನ್ಶೂರೆನ್ಸ್ ನೆಪದಲ್ಲಿ 2ಲಕ್ಷ ವಂಚನೆ; ಸೆನ್ ಠಾಣೆಯಲ್ಲಿ ದೂರು ದಾಖಲು

ಇನ್ಶೂರೆನ್ಸ್ ನೆಪದಲ್ಲಿ 2ಲಕ್ಷ ವಂಚನೆ; ಸೆನ್ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ಮಂಗಳೂರು: ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೆಸರು ಬದಲಾಯಿಸಿಕೊಳ್ಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು 2 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ 45 ವರ್ಷದ ವ್ಯಕ್ತಿಯೊಬ್ಬರು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು ಆಗಸ್ಟ್ ಕೊನೆಯ ವಾರದಲ್ಲಿ ತಿರುವನಂತಪುರದ ಎಚ್‌ಡಿಎಫ್‌ಸಿ ಶಾಖೆಯಲ್ಲಿ ತಮ್ಮ ತಂದೆಯ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 5ರಂದು ರವಿಕುಮಾರ್ ಎಂಬಾತ ಕರೆ ಮಾಡಿ, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಪರಿಶೀಲನೆಯ ನೆಪದಲ್ಲಿ ಮೊಬೈಲ್‌ಗೆ ಬಂದ ಒಟಿಪಿ ನೀಡುವಂತೆ ಕೇಳಿದ್ದ. ಅದರಂತೆ ದೂರುದಾರರು ಒಟಿಪಿ ಹಂಚಿಕೊಂಡಿದ್ದರು.

ಬಳಿಕ ಸೆಪ್ಟೆಂಬರ್ 7ರಂದು ನವೀನ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಾವು ಸೀನಿಯರ್ ಮ್ಯಾನೇಜರ್ ಎಂದು ಹೇಳಿ ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡಿದ್ದರು. ಹೊಸ ಇನ್ಶೂರೆನ್ಸ್ ಮಾಡಿಸಲು ಮುಂಗಡವಾಗಿ 2 ಲಕ್ಷ ರೂ. ಪಾವತಿಸಬೇಕು. ಈ ಹಣವನ್ನು ಬಳಿಕ ಪ್ರೀಮಿಯಂ ಮೊತ್ತದಲ್ಲಿ ಮರಳಿಸಲಾಗುವುದು ಎಂದು ನಂಬಿಸಿ ಲಿಂಕ್ ಒಂದನ್ನು ಕಳುಹಿಸಿದ್ದರು. ಇದನ್ನು ನಂಬಿದ ದೂರುದಾರರು ಲಿಂಕ್ ಮೂಲಕ 2 ಲಕ್ಷ ರೂ. ಪಾವತಿಸಿದ್ದರು.

ಹೆಸರು ಬದಲಾವಣೆಗೆ 45 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದರೂ, ನಿಗದಿತ ಸಮಯ ಕಳೆದರೂ ಯಾವುದೇ ಬದಲಾವಣೆ ಆಗಿರಲಿಲ್ಲ. ಬಳಿಕ ಪದೇ ಪದೇ ಕರೆ ಮಾಡಿ ಹೆಚ್ಚುವರಿ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದಾಗ ದೂರುದಾರರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1ರಂದು ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಇದೀಗ ಸೆನ್ ಪೊಲೀಸ್ ಠಾಣೆಗೆ ವಂಚನೆ ಕುರಿತು ದೂರು ನೀಡಿದ್ದಾರೆ.

- Advertisement -

Latest News

error: Content is protected !!