
ಬೆಳ್ತಂಗಡಿ : ಗರ್ಡಾಡಿ ಗ್ರಾಮದ ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ ವತಿಯಿಂದ 3ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನ.1 ರಂದು ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ, ಗರ್ಡಾಡಿಯ ಅಧ್ಯಕ್ಷರಾದ ಪ್ರದೀಪ್ ಪಡ್ತಿರೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಡಾ.ಬಾಬಾ. ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರ್ನ ಪ್ರಾಂಶುಪಾಲರಾದ ಶ್ರೀ ಅಲೆಕ್ಸ್ ಐವನ್ ಸಿಕ್ವೇರಾ, ಪಡಂಗಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮೆಲ್ವಿನ್ ಸಿಕ್ವೇರಾ, ಶ್ರೀ ಅಬ್ಬಾಸ್ ಪಜೆಮಾರ್, ಶ್ರೀ ಸತ್ಯ ಸಾರಮುಪ್ಪಣ್ಯ ದೈವಸ್ಥಾನ, ಪಡ್ತಿರೆ ಗರ್ಡಾಡಿಯ ಪ್ರಧಾನ ಅರ್ಚಕರಾದ ಬಾಬು ಪಡ್ತಿರೆ, ದೈವಸ್ಥಾನದ ಅಧ್ಯಕ್ಷರಾದ ಕರಿಯ ಪಡ್ತಿರೆ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷರಾದ ನಾರಾಯಣ ಅವರು ಉಪಸ್ಥಿತರಿದ್ದರು.
ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಕ್ರೀಡಾಸ್ಫೂರ್ತಿ, ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡಾಕೂಟಕ್ಕೆ ಗಣ್ಯರು ಶುಭ ಹಾರೈಸಿದರು.


