Thursday, October 29, 2026
Homeಅಪರಾಧಮದುವೆ ನಿರಾಕರಿಸಿದ ವ್ಯಕ್ತಿಗೆ ಜೀವ ಬೆದರಿಕೆ; 42.97 ಲಕ್ಷ ರೂ. ವಂಚನೆ ಆರೋಪದಲ್ಲಿ ಇಬ್ಬರ ಬಂಧನ

ಮದುವೆ ನಿರಾಕರಿಸಿದ ವ್ಯಕ್ತಿಗೆ ಜೀವ ಬೆದರಿಕೆ; 42.97 ಲಕ್ಷ ರೂ. ವಂಚನೆ ಆರೋಪದಲ್ಲಿ ಇಬ್ಬರ ಬಂಧನ

- Advertisement -
- Advertisement -

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಬೆದರಿಕೆ ಹಾಕಿ 42,97,350 ರೂ. ಹಣ ಪಡೆದು ವಾಪಸ್ ನೀಡದೆ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಾಗರತ್ನ ಎಚ್. (42) ಮತ್ತು ಹೇಮಂತ್ (41) ಎಂದು ಗುರುತಿಸಲಾಗಿದೆ.

ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಕೆ. ಅವರು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದರು. ಈ ವೇಳೆ 2024ರ ಜನವರಿಯಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ನಾಗರತ್ನ ಪರಿಚಯವಾಗಿದ್ದರು. ನಾಗರತ್ನ ಮದುವೆಯ ಪ್ರಸ್ತಾಪ ಮಾಡಿದ್ದರೂ, ಪ್ರದೀಪ್ ಅದನ್ನು ನಿರಾಕರಿಸಿದ್ದರು. ಬಳಿಕ ನಾಗರತ್ನ ತನ್ನ ಕಷ್ಟಗಳನ್ನು ಹೇಳಿಕೊಂಡು ಹಂತ ಹಂತವಾಗಿ ಪ್ರದೀಪ್ ಅವರಿಂದ ಹಣ ಪಡೆದಿದ್ದಾಳೆ ಎನ್ನಲಾಗಿದೆ. ತನ್ನ ಖಾತೆ ಹಾಗೂ ಪರಿಚಯಸ್ಥರ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ. 2024ರ ಜನವರಿಯಿಂದ 2026ರ ಜನವರಿವರೆಗೆ ಒಟ್ಟು 42.97 ಲಕ್ಷ ರೂ. ಪಡೆದಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ವಾಪಸ್ ಕೇಳಿದಾಗ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಹಾಗೂ ಪ್ರದೀಪ್ ಕೆಲಸ ಮಾಡುವ ಕಚೇರಿಗೆ ಬಂದು ಅವಮಾನಿಸುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಅಲ್ಲದೆ, ಸುಳ್ಳು ಆರೋಪದಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದಳು ಎಂದು ದೂರಲಾಗಿದೆ.

ಈ ಸಂಬಂಧ ಪ್ರದೀಪ್ ನೀಡಿದ ದೂರಿನ ಮೇರೆಗೆ ನಾಗರತ್ನ, ಹೇಮಂತ್, ಪ್ರಮೋದ್ ಮತ್ತು ರೇಣುಕಾ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನಲ್ಲಿ ನಾಗರತ್ನ ಮತ್ತು ಹೇಮಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!