Thursday, October 29, 2026
Homeಕರಾವಳಿಉಡುಪಿಕೊಂಕಣ ರೈಲ್ವೇಯ ಹಣಕಾಸು ವಿಭಾಗದ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಕವಿತಾ ರಾಕೇಶ್ ಸಾತ್ವಿ

ಕೊಂಕಣ ರೈಲ್ವೇಯ ಹಣಕಾಸು ವಿಭಾಗದ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಕವಿತಾ ರಾಕೇಶ್ ಸಾತ್ವಿ

- Advertisement -
- Advertisement -

ಉಡುಪಿ: ಕೊಂಕಣ ರೈಲ್ವೇಯ ಹಣಕಾಸು ವಿಭಾಗದ ನಿರ್ದೇಶಕಿಯಾಗಿ ಕವಿತಾ ರಾಕೇಶ್ ಸಾತ್ವಿ ಅವರು ಅಕ್ಟೋಬರ್ 23ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಸಿಎ ಮತ್ತು ಎಂಬಿಎ ಪದವೀಧರೆಯಾಗಿರುವ ಕವಿತಾ ಸಾತ್ವಿ ಅವರು ಈ ಹಿಂದೆ ಕಾಮರಾಜರ್ ಪೋರ್ಟ್ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಲೆಕ್ಕಪರಿಶೋಧಕರಾಗಿರುವ ಅವರು ಖಾಸಗಿ ಹಾಗೂ ಅರೆಸರ್ಕಾರಿ ವಲಯಗಳಲ್ಲಿ ಹಣಕಾಸು, ಲೆಕ್ಕಪತ್ರ ಮತ್ತು ವಾಣಿಜ್ಯ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 24 ವರ್ಷಗಳ ಅನುಭವ ಹೊಂದಿದ್ದಾರೆ ಎಂದು ಕೊಂಕಣ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಶೀಲ್ ಬಿ. ನಾರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!