Wednesday, October 28, 2026
Homeತಾಜಾ ಸುದ್ದಿಬಿಗ್ ಬಾಸ್ ಮನೆಗೆ ಸೀಸನ್ 12ರ ರಕ್ಷಿತಾ ಶೆಟ್ಟಿ ಧಿಡೀರ್ ಎಂಟ್ರಿ

ಬಿಗ್ ಬಾಸ್ ಮನೆಗೆ ಸೀಸನ್ 12ರ ರಕ್ಷಿತಾ ಶೆಟ್ಟಿ ಧಿಡೀರ್ ಎಂಟ್ರಿ

- Advertisement -
- Advertisement -

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ವಿಶೇಷ ಮೈಲಿಗಲ್ಲಿನ ಸಂಭ್ರಮದ ಬೆನ್ನಲ್ಲೇ ಮನೆಗೆ ಸೀಸನ್ 12ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಆಗಮನವಾಗಿದೆ. ಸೂಟ್‌ಕೇಸ್ ಹಿಡಿದುಕೊಂಡು ಧಿಡೀರ್ ಎಂಟ್ರಿ ಕೊಟ್ಟ ರಕ್ಷಿತಾ ಅವರನ್ನು ಕಂಡು ಮನೆಮಂದಿ ಹಾಗೂ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ.

ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿಗೆ ವರನನ್ನು ಹುಡುಕುವ ‘ಶೆಟ್ಟಿ ಡಾನ್ ಮದುವೆ ಕಥೆ’ ಎಂಬ ವಿನೋದಮಯ ಟಾಸ್ಕ್ ನಡೆಯುತ್ತಿದೆ. ಈ ಹಾಸ್ಯಭರಿತ ನಾಟಕೀಯ ಟಾಸ್ಕ್‌ನಲ್ಲಿ ಸ್ಪರ್ಧಿ ಪ್ರಶಾಂತ್ ತಾಯಿಯ (ಪ್ರಶಾಂತಿ) ವೇಷ ಧರಿಸಿದ್ದರೆ, ತಾಂಡವ್ ರಾಮ್ ತಂದೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ದಂಪತಿಯ ಮಗಳಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ರಕ್ಷಿತಾ ಶೆಟ್ಟಿ, ಸದ್ಯ ಇದೇ ಟಾಸ್ಕ್‌ನ ಭಾಗವಾಗಿದ್ದಾರೆ. “ಪ್ರಶಾಂತಿ ಎಂಬಿಎ ಓದಲು ಮಲೇಷ್ಯಾಗೆ ತೆರಳಿದ್ದಾಗ ಪ್ರೇಮವಿವಾಹವಾಗಿತ್ತು. ಆ ಪ್ರೇಮದ ಸಾಕ್ಷಿಯೇ ಈ ರಕ್ಷಿತಾ ಶೆಟ್ಟಿ” ಎಂದು ಬಿಗ್‌ಬಾಸ್ ತಮಾಷೆಯಾಗಿ ಪರಿಚಯಿಸಿ ರಕ್ಷಿತಾ ಅವರನ್ನು ಮನೆಗೆ ಸ್ವಾಗತಿಸಿದರು.

ವೈಲ್ಡ್ ಕಾರ್ಡ್ ಅಥವಾ ಅತಿಥಿ ಎಂಟ್ರಿ?: ಸೂಟ್‌ಕೇಸ್ ಸಮೇತ ಗ್ರ್ಯಾಂಡ್ ಎಂಟ್ರಿ ನೀಡಿರುವ ರಕ್ಷಿತಾ ಶೆಟ್ಟಿ, ಪ್ರಸ್ತುತ ಮದುವೆ ಟಾಸ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರು ಬಿಗ್ ಬಾಸ್ ಮನೆಗೆ ಅಧಿಕೃತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೋ ಅಥವಾ ಕೇವಲ ಅತಿಥಿಯಾಗಿ ಬಂದಿದ್ದಾರೋ ಎಂಬುದು ಈಗ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಪ್ರಶ್ನೆಗೆ ಮುಂಬರುವ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

- Advertisement -

Latest News

error: Content is protected !!