Tuesday, October 27, 2026
Homeಕರಾವಳಿಉಡುಪಿಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತ್ಯು

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತ್ಯು

- Advertisement -
- Advertisement -

ಉಡುಪಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕುಂದಾಪುರದ ಕೆ. ಗಣೇಶ್ ಪ್ರಭು ಎನ್ನಲಾಗಿದೆ

ಘಟನೆಯ ವಿವರ: ಅ. 25ರ ಮಧ್ಯರಾತ್ರಿ ಕುಂದಾಪುರ ಕಸಬಾ ಗ್ರಾಮದ ಮೈಲಾರೇಶ್ವರ ದೇವಸ್ಥಾನದ ಸಮೀಪ ಸಂಗಮ್‌-ಫನ್ನೀರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಣೇಶ್ ಪ್ರಭು ಅವರು ಮೋಟಾರ್ ಸೈಕಲ್‌ನಲ್ಲಿ ಸಂಗಮ್ ಕಡೆಯಿಂದ ಫನ್ನೀರ್ ಕಡೆಗೆ ರಸ್ತೆಯ ಎಡಬದಿಯಲ್ಲಿ ಸಂಚರಿಸುತ್ತಿದ್ದರು. ಈ ಸಂದರ್ಭ ಫನ್ನೀರ್ ಜ್ಯುವೆಲ್ಲರ್ಸ್ ಕಡೆಯಿಂದ ಸಂಗಮ್ ಕಡೆಗೆ ಬೈಕ್‌ನಲ್ಲಿ ಸಹಸವಾರ ಸುಜನ್‌ನನ್ನು ಕೂರಿಸಿಕೊಂಡು ಬರುತ್ತಿದ್ದ ಅಕ್ಷಿತ್, ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಗಣೇಶ್ ಪ್ರಭು ಅವರ ಬೈಕ್‌ಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಢಿಕ್ಕಿಯ ರಭಸಕ್ಕೆ ಗಣೇಶ್ ಪ್ರಭು ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಗಾಯಾಳುವಿಗೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -

Latest News

error: Content is protected !!