Saturday, October 24, 2026
Homeಕರಾವಳಿಉಡುಪಿಉಡುಪಿ: ವಿಮೆ ಆಮಿಷ ಒಡ್ಡಿ ವೃದ್ಧೆಯ ಸರ ಕದ್ದ ಖದೀಮನ ಬಂಧನ

ಉಡುಪಿ: ವಿಮೆ ಆಮಿಷ ಒಡ್ಡಿ ವೃದ್ಧೆಯ ಸರ ಕದ್ದ ಖದೀಮನ ಬಂಧನ

- Advertisement -
- Advertisement -

ಉಡುಪಿ; ವಿಮಾ ಹಣ ಕೊಡಿಸುವುದಾಗಿ ನಂಬಿಸಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಹಿರಿಯಡಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಉಡುಪಿಯ ಸುಬ್ರಹ್ಮಣ್ಯ ನಗರದ ನಿವಾಸಿ, ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ಉಮೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ ಎಂಬ ವೃದ್ಧೆಯ ಮನೆಗೆ ಸೆ.13ರಂದು ಬಂದಿದ್ದ ಆರೋಪಿ, ‘ನಿಮ್ಮ ಮಗ ಮೃತಪಟ್ಟಿದ್ದು, ಆತನ ವಿಮಾ ಹಣ ಕೊಡಿಸುತ್ತೇನೆ’ ಎಂದು ನಂಬಿಸಿದ್ದ. ಬಳಿಕ ಅದೇ ದಿನ ಮಧ್ಯಾಹ್ನ ಮತ್ತೆ ಮನೆಗೆ ಬಂದು ಮಾತಿನಲ್ಲಿ ಮರೆಸಿ, ವೃದ್ಧೆ ಧರಿಸಿದ್ದ 2 ಪವನ್ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹಿರಿಯಡಕ ಪೊಲೀಸರು ಅ.23ರಂದು ಆರೋಪಿಯನ್ನು ಆತನ ಮನೆಯ ಸಮೀಪ ಬಂಧಿಸಿದ್ದಾರೆ. ಆತನಿಂದ ಕಳವು ಮಾಡಿದ್ದ 1.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!