Thursday, October 22, 2026
HomeUncategorizedಬಂಟ್ವಾಳ: ಶಾರ್ದೂಲ ವೇಷ ಹಾಕಿ ಬಂದ ಹಣವನ್ನು ಬಡ ರೋಗಿಗೆ ನೀಡಿದ ಪುಟಾಣಿಗಳು; ಮಕ್ಕಳಿಗೆ 25...

ಬಂಟ್ವಾಳ: ಶಾರ್ದೂಲ ವೇಷ ಹಾಕಿ ಬಂದ ಹಣವನ್ನು ಬಡ ರೋಗಿಗೆ ನೀಡಿದ ಪುಟಾಣಿಗಳು; ಮಕ್ಕಳಿಗೆ 25 ಸಾವಿರ ರೂಪಾಯಿ ನೀಡಿ ಸನ್ಮಾನಿಸಿದ ಮಿಥುನ್ ರೈ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಪಡು ಗ್ರಾಮದ ಏಳು ಜನ ಪುಟಾಣಿ ಮಕ್ಕಳು ತಾವೇ ಗೋಣಿ ಚೀಲ ಹಾಗೂ ಡಬ್ಬಿಗಳಿಂದ ಶಾರ್ದೂಲವೇಷ (ಹುಲಿವೇಷ) ತಯಾರಿಸಿ ಕುಣಿದು, ಆ ಮೂಲಕ ಸಂಗ್ರಹವಾದ ಹಣವನ್ನು ಬಡ ರೋಗಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಜಿಪ ಗುತ್ತು ಪಡು ಪ್ರಾಥಮಿಕ ಶಾಲೆಯ ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಗ್ ಹಾಗೂ ರಿತೇಶ್ ಈ ಅಪರೂಪದ ಕರುಣಾಮಯಿ ಕಾರ್ಯ ಮಾಡಿದ ಮಕ್ಕಳು. ಎರಡು ದಿನಗಳ ಕಾಲ ಹುಲಿವೇಷ ಧರಿಸಿ ಕುಣಿದು ಸಂಗ್ರಹಿಸಿದ್ದ ₹5,000 ದೇಣಿಗೆಯನ್ನು, ಕಳೆದ ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಬಡ ರೋಗಿಗೆ ಹಸ್ತಾಂತರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಕ್ಕಳ ಈ ಸತ್ಕಾರ್ಯದ ವಿಷಯ ತಿಳಿದ ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ, ಮಕ್ಕಳನ್ನು ಪಿಲಿನಲಿಕೆ ವೇದಿಕೆಗೆ ಕರೆಸಿ ಗೌರವಪೂರ್ವಕವಾಗಿ ಸನ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ, ಪುಟಾಣಿ ಮಕ್ಕಳ ಈ ಸೇವೆಯನ್ನು ಮೆಚ್ಚಿ ಅವರಿಗೆ ₹25,000 ಪ್ರೋತ್ಸಾಹಧನ ನೀಡಿ ಶುಭ ಹಾರೈಸಿದ್ದಾರೆ.

- Advertisement -

Latest News

error: Content is protected !!