- Advertisement -
- Advertisement -
ಮಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಪರಿಸರ, ಪ್ರಕೃತಿ ಮತ್ತು ಜಲಚರ ಸಂಪನ್ಮೂಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಿಲಿಕುಳದಲ್ಲಿ ಅಕ್ಟೋಬರ್ 25ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9.30ರಿಂದ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯ ಮೇಳ, ಮೀನು ಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮ ಹಾಗೂ ಮತ್ಸ್ಯ ಆಹಾರ ಮೇಳ ನಡೆಯಲಿದೆ. ಮತ್ಸ್ಯ ಮೇಳದ ಅಂಗವಾಗಿ ಲೇಕ್ ಗಾರ್ಡನ್ ಮುಂಭಾಗದಲ್ಲಿ ವಿಶೇಷ ಮೀನಿನ ಖಾದ್ಯಗಳ ಆಹಾರ ಮೇಳವೂ ನಡೆಯಲಿದೆ. ಇಲ್ಲಿ ಆಹಾರ ಮಳಿಗೆಗಳನ್ನು ತೆರೆಯಲು ಆಸಕ್ತ ಹೋಟೆಲ್ ಉದ್ಯಮಿಗಳು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಮಳಿಗೆಗಳ ನೋಂದಣಿಗೆ ಅಕ್ಟೋಬರ್ 22ರೊಳಗೆ 0824-2263565 ಸಂಖ್ಯೆಯನ್ನು ಸಂಪರ್ಕಿಸುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
- Advertisement -


