Monday, October 19, 2026
HomeUncategorizedಲೋಕಭವನದಲ್ಲಿ ರಾಜ್ಯಪಾಲರಿಂದ ಆಯುಧ ಪೂಜೆ ಮತ್ತು ದುರ್ಗಾ ಪೂಜೆ

ಲೋಕಭವನದಲ್ಲಿ ರಾಜ್ಯಪಾಲರಿಂದ ಆಯುಧ ಪೂಜೆ ಮತ್ತು ದುರ್ಗಾ ಪೂಜೆ

- Advertisement -
- Advertisement -

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿಯ ಸಂದರ್ಭದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಲೋಕಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಲೋಕಭವನದ ತಮ್ಮ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿದ ರಾಜ್ಯಪಾಲರು, ಬಳಿಕ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ದುರ್ಗಾ ದೇವಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.ಲೋಕಭವನದ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹಬ್ಬದ ಸಂತಸವನ್ನು ಹಂಚಿಕೊಂಡ ರಾಜ್ಯಪಾಲರು, ಅವರಿಗೆ ವಿಜಯ ದಶಮಿ ಹಾಗೂ ಆಯುಧ ಪೂಜೆಯ ಶುಭಾಶಯಗಳನ್ನು ಕೋರಿದರು.ಇದೇ ವೇಳೆ ರಾಜ್ಯದ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ ರಾಜ್ಯಪಾಲರು, ಆಯುಧ ಪೂಜೆ ನಮ್ಮ ಜೀವನಕ್ಕೆ ಆಧಾರವಾಗಿರುವ ಸಾಧನಗಳು ಮತ್ತು ಉಪಕರಣಗಳಿಗೆ ಗೌರವ ಸಲ್ಲಿಸುವ ವಿಶಿಷ್ಟ ಭಾರತೀಯ ಪರಂಪರೆಯಾಗಿದೆ. ನಾವು ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯನ್ನು ಬೆಳೆಸಿಕೊಳ್ಳುವ ಸಂಕಲ್ಪಕ್ಕೆ ಈ ದಿನ ಸ್ಫೂರ್ತಿ ನೀಡಲಿ ಎಂದು ಆಶಿಸಿದರು.ವಿಜಯ ದಶಮಿ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ಮುನ್ನಡೆಯುವ ಸಂದೇಶವನ್ನು ನೀಡುವ ಪವಿತ್ರ ಸಂದರ್ಭವಾಗಿದ್ದು, ನಮ್ಮ ಜೀವನದಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ, ಸತ್ಯ, ಶಾಂತಿ, ಸದಾಚಾರ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ ಎಂದೂ ರಾಜ್ಯಪಾಲರು ಕರೆ ನೀಡಿದರು.

- Advertisement -

Latest News

error: Content is protected !!