Sunday, October 18, 2026
Homeಕರಾವಳಿಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

- Advertisement -
- Advertisement -

ಸುಬ್ರಹ್ಮಣ್ಯ: ಕುಮಾರ ಪರ್ವತದ ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಅ.18ರಿಂದ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾರಣಿಗರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಪರಿಸರದ ಸ್ವಚ್ಛತೆ ಕಾಪಾಡುವುದು, ನಿಗದಿತ ಸಮಯಕ್ಕೆ ಹಾಜರಾಗುವುದು ಹಾಗೂ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸಹಕರಿಸುವುದು ಕಡ್ಡಾಯವಾಗಿದೆ.

ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡಿ, ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇನ್ನು ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ಮೂಲಕ ಚಾರಣ ಆರಂಭಿಸುವ ಕುರಿತು ಯಾವುದೇ ದಿನಾಂಕ ನಿಗದಿಯಾಗಿಲ್ಲ.

- Advertisement -

Latest News

error: Content is protected !!