Wednesday, October 14, 2026
Homeಕರಾವಳಿಉಡುಪಿಅ. 9ರಿಂದ ನಾಪತ್ತೆಯಾಗಿದ್ದ ಸುರೇಶ್ ಶೆಟ್ಟಿ ಮೃತದೇಹ ನದಿಯಲ್ಲಿ ಪತ್ತೆ

ಅ. 9ರಿಂದ ನಾಪತ್ತೆಯಾಗಿದ್ದ ಸುರೇಶ್ ಶೆಟ್ಟಿ ಮೃತದೇಹ ನದಿಯಲ್ಲಿ ಪತ್ತೆ

- Advertisement -
- Advertisement -

ಉಡುಪಿ: ಅಕ್ಟೋಬರ್ 9ರಿಂದ ನಾಪತ್ತೆಯಾಗಿದ್ದ 51 ವರ್ಷದ ಸುರೇಶ್ ಶೆಟ್ಟಿ ಅವರ ಮೃತದೇಹ ಬುಧವಾರ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ.

ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿಯಾಗಿದ್ದ ಸುರೇಶ್ ಶೆಟ್ಟಿ ಅವರು ಅಕ್ಟೋಬರ್ 9ರಂದು ಮಧ್ಯಾಹ್ನ ಕಟೀಲಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಬುಧವಾರ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಗುರುತು ಪತ್ತೆಹಚ್ಚಿದ್ದಾರೆ.

ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!