Thursday, October 8, 2026
Homeಕರಾವಳಿಉಡುಪಿಉಡುಪಿ: ಜನಗಣತಿ ಹೆಸರಲ್ಲಿ ಮನೆಗೆ ನುಗ್ಗಿ ವೃದ್ಧೆಯನ್ನು ತಳ್ಳಿ ಚಿನ್ನದ ಸರ ದೋಚಿದ ಖದೀಮರು

ಉಡುಪಿ: ಜನಗಣತಿ ಹೆಸರಲ್ಲಿ ಮನೆಗೆ ನುಗ್ಗಿ ವೃದ್ಧೆಯನ್ನು ತಳ್ಳಿ ಚಿನ್ನದ ಸರ ದೋಚಿದ ಖದೀಮರು

- Advertisement -
- Advertisement -

ಉಡುಪಿ : ಜನಗಣತಿ (SIR) ಸರ್ವೇ ಹೆಸರಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 74 ವರ್ಷದ ವೃದ್ಧೆಯನ್ನು ಕೆಳಗೆ ತಳ್ಳಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ. ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ವಂಚನೆ ಹಾಗೂ ದರೋಡೆಗೆ ಒಳಗಾದ ವೃದ್ಧೆ.

ಘಟನೆಯ ವಿವರ: ಅಕ್ಟೋಬರ್ 07 ರಂದು ಸಂಜೆ 3:47 ರ ಸುಮಾರಿಗೆ ಶಾಂತ ಕಾರಂತ್ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಇಬ್ಬರು ಅಪರಿಚಿತರು ಬಂದಿದ್ದಾರೆ. ತಾವು ಜನಗಣತಿ ಕುರಿತು ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಶಾಂತ ಕಾರಂತ್ ಅವರು, “ಮಗ ಬಂದ ಮೇಲೆ ಆತ ನೀಡುವ ಕಾಗದಕ್ಕೆ ಸಹಿ ಮಾಡುತ್ತೇನೆ” ಎಂದು ಹೇಳಿ ಮನೆಯೊಳಗೆ ತೆರಳಿದ್ದಾರೆ.

ವೃದ್ಧೆ ಒಳಗೆ ತೆರಳುತ್ತಿದ್ದಂತೆ ಹಿಂಬಾಲಿಸಿದ ಅಪರಿಚಿತರು ಏಕಾಏಕಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ. ಬಳಿಕ ವೃದ್ಧೆಯನ್ನು ಬಲವಾಗಿ ದೂಡಿ ಕೆಳಗೆ ಬೀಳಿಸಿ, ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೇಟ್ ಮಣಿ ಇರುವ ಬೆಲೆಬಾಳುವ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆ ಕುರಿತು ಶ್ರೀನಿವಾಸ ಕಾರಂತ್ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ BNS ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

- Advertisement -

Latest News

error: Content is protected !!