Wednesday, October 7, 2026
Homeತಾಜಾ ಸುದ್ದಿರಾತ್ರಿ 2 ಗಂಟೆಗೆ ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ: ಹೊರಗಡೆ ಔಷಧಿ...

ರಾತ್ರಿ 2 ಗಂಟೆಗೆ ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ: ಹೊರಗಡೆ ಔಷಧಿ ಬರೆಯುತ್ತಿದ್ದ ವೈದ್ಯರಿಗೆ ಕ್ಲಾಸ್!

- Advertisement -
- Advertisement -

ಚನ್ನಪಟ್ಟಣ : ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ 2 ಗಂಟೆ ಸುಮಾರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಗೆ ಶಾಕ್ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ತಡರಾತ್ರಿ ನಗರಕ್ಕೆ ಆಗಮಿಸಿದ್ದ ಸಚಿವರು, ಯಾವುದೇ ಪೂರ್ವ ಮುನ್ಸೂಚನೆ ನೀಡದೆ ನೇರವಾಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದರು.

ಭೇಟಿಯ ವೇಳೆ ಆಸ್ಪತ್ರೆಯ ಜನರಲ್ ವಾರ್ಡ್, ಐಸಿಯು ಘಟಕ ಹಾಗೂ ಶೌಚಾಲಯಗಳ ನೈರ್ಮಲ್ಯವನ್ನು ಪರಿಶೀಲಿಸಿದ ಸಚಿವರು, ಸಿಬ್ಬಂದಿಯ ಹಾಜರಾತಿ ಪುಸ್ತಕವನ್ನು ತಪಾಸಣೆ ನಡೆಸಿ ಕರ್ತವ್ಯದಲ್ಲಿದ್ದ ವೈದ್ಯರಿಂದ ಮಾಹಿತಿ ಪಡೆದರು.

ಖಾಸಗಿ ಮೆಡಿಕಲ್‌ಗೆ ಔಷಧಿ ಬರೆಯುವುದಕ್ಕೆ ಗರಂ: ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ಔಷಧಿ ತರಲು ಬರೆದುಕೊಡುತ್ತಿರುವ ವಿಚಾರ ತಿಳಿದ ಸಚಿವರು తీవ్ర ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲಾ ಔಷಧಿಗಳು ಹಾಗೂ ಸೌಲಭ್ಯಗಳಿದ್ದರೂ ಹೊರಗಡೆ ಔಷಧಿ ಬರೆದುಕೊಡುತ್ತಿರುವುದಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಗೆ ಬರುವ ಬಡ ಹಾಗೂ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಚಿವರು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!