Tuesday, October 6, 2026
Homeಕರಾವಳಿಉಡುಪಿಕುಂದಾಪುರ: 3 ದಿನಗಳಿಂದ ನಾಪತ್ತೆಯಾಗಿದ್ದ ಟಿಪ್ಪರ್ ಮಾಲಕನ ಮೃತದೇಹ ಸಂಶಯಾಸ್ಪದವಾಗಿ ಪತ್ತೆ!

ಕುಂದಾಪುರ: 3 ದಿನಗಳಿಂದ ನಾಪತ್ತೆಯಾಗಿದ್ದ ಟಿಪ್ಪರ್ ಮಾಲಕನ ಮೃತದೇಹ ಸಂಶಯಾಸ್ಪದವಾಗಿ ಪತ್ತೆ!

- Advertisement -
- Advertisement -

ಕುಂದಾಪುರ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ, ಯುವ ಟಿಪ್ಪರ್ ಮಾಲಕ ಕವೀನಾ ನಾಯ್ಕ್ (26) ಅವರ ಮೃತದೇಹ ಸೋಮವಾರ ಹೊಸಂಗಡಿಯ ಮಾತಿನಮಠ ಬಳಿಯ ಖಾಸಗಿ ತೋಟದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಅಕ್ಟೋಬರ್ 2ರ ಸಂಜೆ ಸ್ನೇಹಿತನ ಬಳಿ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದ ಕವೀನಾ, ಮನೆಗೂ ತಲುಪದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಬಗ್ಗೆ ಕುಟುಂಬಸ್ಥರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೋಧ ಕಾರ್ಯ ನಡೆಸುತ್ತಿದ್ದಾಗ ಸೋಮವಾರ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ಮೃತದೇಹ ಸಿಕ್ಕ ಸ್ಥಳವು ಅವರು ಮನೆಗೆ ತೆರಳುವ ದಾರಿಯಲ್ಲಿ ಇರಲಿಲ್ಲ. ಅಲ್ಲದೆ ಕಾಲಿನಲ್ಲಿ ಚಪ್ಪಲಿಯೂ ಇರದ ಕಾರಣ ಸಾವಿನ ಬಗ್ಗೆ ತೀವ್ರ ಸಂಶಯ ವ್ಯಕ್ತವಾಗಿದೆ. ಸಹೋದರ ಪ್ರವೀಣ್ ನೀಡಿದ ದೂರಿನನ್ವಯ ಅಮಾಸೆಬೈಲು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!