Tuesday, September 22, 2026
Homeಕರಾವಳಿಮಂಗಳೂರುಮೂಡಬಿದರೆ;ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಮೂಡಬಿದರೆ;ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ

- Advertisement -
- Advertisement -

ಮೂಡುಬಿದಿರೆ: ಬಿಜೆಪಿಯ ಸಕ್ರಿಯ ಯುವ ಮುಖಂಡ, ಕಿನ್ನಿಗೋಳಿ ನಿವಾಸಿ ಪ್ರತೀಕ್‌ ಶೆಟ್ಟಿ (40) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ತಡರಾತ್ರಿ ನಿಧನ ಹೊಂದಿದ್ದಾರೆ.

ಮೂಲ್ಕಿ-ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಪ್ರತೀಕ್ ಶೆಟ್ಟಿ ಅವರು, ಕಳೆದ ಹಲವು ವರ್ಷಗಳಿಂದ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಮೂಡುಬಿದಿರೆ ಹಾಗೂ ಮೂಲ್ಕಿ ಜಿಲ್ಲಾ ಬಿಜೆಪಿ ಘಟಕಗಳಲ್ಲಿ ವಿವಿಧ ಪದಾಧಿಕಾರಿಯಾಗಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ತಮ್ಮ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಪ್ರತೀಕ್ ಶೆಟ್ಟಿ ಅವರ ಅಕಾಲಿಕ ಅಗಲಿಕೆಗೆ ಪಕ್ಷದ ಪ್ರಮುಖರು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!