Tuesday, September 22, 2026
Homeಕರಾವಳಿಮಂಗಳೂರುಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರ ವಿಶೇಷ ಮುತುವರ್ಜಿ,ಸೂಚನೆ ಮೇರೆಗೆ ಧರ್ಮಸ್ಥಳ- ಉಜಿರೆ-ಬೆಳಾಲು- ಬಂದಾರು- ಮೊಗ್ರು ಅಲೆಕ್ಕಿ...

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರ ವಿಶೇಷ ಮುತುವರ್ಜಿ,ಸೂಚನೆ ಮೇರೆಗೆ ಧರ್ಮಸ್ಥಳ- ಉಜಿರೆ-ಬೆಳಾಲು- ಬಂದಾರು- ಮೊಗ್ರು ಅಲೆಕ್ಕಿ – ಇಳಂತಿಲ-ಉಪ್ಪಿನಂಗಡಿ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

- Advertisement -
- Advertisement -

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರ ವಿಶೇಷ ಕಾಳಜಿ ಹಾಗೂ ಸೂಚನೆಯ ಮೇರೆಗೆ, ಧರ್ಮಸ್ಥಳದಿಂದ ಉಜಿರೆ, ಬಂದಾರು, ಇಳಂತಿಲ,ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ನೂತನ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಸೇವೆಗೆ ಇತ್ತೀಚೆಗೆ ಪ್ರಾರಂಭಗೊಂಡಿದೆ .


ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಅನುಕೂಲಕರವಾಗಿದೆ. ಬೆಳಗ್ಗೆ ಧರ್ಮಸ್ಥಳದಿಂದ ಬೆಳಾಲು, ಬಂದಾರು, ಮೊಗ್ರು ಹಾಗೂ ಇಳಂತಿಲ ಮಾರ್ಗವಾಗಿ ಉಪ್ಪಿನಂಗಡಿಗೆ ಸಂಚರಿಸಿ, ಸಂಜೆ ಉಪ್ಪಿನಂಗಡಿ, ಇಳಂತಿಲ, ಮೊಗ್ರು ಅಲೆಕ್ಕಿ, ಬಂದಾರು, ಬೆಳಾಲು, ಉಜಿರೆ ಸಂಚರಿಸುತ್ತಿದೆ, ಈ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಬಸ್ ಸೇವೆ ನಿತ್ಯದ ಪ್ರಯಾಣವನ್ನು ಸುಲಭಗೊಳಿಸಲಿದೆ.

ಈ ಭಾಗದ ಗ್ರಾಮೀಣ ರಸ್ತೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕೆಂಬುದು ಸ್ಥಳೀಯ ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಯಾಗಿತ್ತು. ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಸ್ ಮಂಜೂರು ಮಾಡಿಸಿದ್ದಾರೆ.ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಈ ನೂತನ ಬಸ್ ಸೇವೆಯಿಂದಾಗಿ ಉಜಿರೆ, ಬೆಳಾಲು, ಬಂದಾರು, ಮೊಗ್ರು, ಇಳಂತಿಲ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಪ್ರಯಾಣಿಕರಿಗೆ ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವುದು ಇನ್ಮುಂದೆ ಸರಳವಾಗಲಿದೆ. ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಶಾಸಕ ಹರೀಶ್ ಪೂಂಜ ಹಾಗೂ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!